ಹರೀಶ್ ಪೂಂಜಾ ತಮ್ಮ ಕಚೇರಿ ಒಳಗಿನಿಂದ ಚೀಲದಲ್ಲಿ ತುಂಬಿಕೊಂಡು ಹಣ ತರುತ್ತಾರಂತೆ| ‘ಬ್ಯಾರಿ ಓಟು ಬೊಡ್ಚಿ’ ನಂತರ ಮತ್ತೊಂದು ವಿವಾದದಲ್ಲಿ ಪೂಂಜಾ
ಬೆಳ್ತಂಗಡಿ: ಹರೀಶ್ ಪೂಂಜಾರವರಿಗೆ ಬಹುಶಃ ಇತ್ತೀಚೆಗೆ ಅವರ ಪರವಾಗಿ ಯಾರಾದರೂ ನೀಡುವ ಹೇಳಿಕೆ ಹಾಗೂ ಅವರು ಖುದ್ದಾಗಿ ನೀಡುವ ಹೇಳಿಕೆ ಅವರ ವಿರುದ್ಧವಾಗಿಯೇ ಆಗುತ್ತಿದೆ. ಇತ್ತೀಚೆಗಷ್ಟೇ ನನಗೆ ಮುಸ್ಲಿಂರ ವೋಟ್ ನನಗೆ ಬೇಡ, ಹಿಂದೂಗಳ ವೋಟಷ್ಟೇ ಸಾಕು ಸಂವಿಧಾನ ವಿರೋಧಿ ಹೇಳಿಕೆಯೊಂದನ್ನು ನೀಡಿ, ಕಟು ಟೀಕೆಗಳನ್ನು ಎದುರಿಸಬೇಕಾಯಿತು. ಈಗ ಮತ್ತೊಂದು ಹೇಳಿಕೆ ಕೂಡಾ ಅವರಿಗೆ ಮುಳುವಾಗಿದೆ.
ಅದೇನೆಂದರೆ ಹರೀಶ್ ಪೂಂಜಾರವರು ತಮ್ಮ ಕಚೇರಿ ಒಳಗಿನಿಂದ ಚೀಲದಲ್ಲಿ ತುಂಬಿಕೊಂಡು ಹಣ ತರುತ್ತಾರಂತೆ. ಮನೆಗೆ ಯಾರೇ ಬರಲಿ, ಒಳಗೆ ಕಂತೆ ಕಂತೆ ನೋಟು ತಗೊಂಡು ಬರ್ತಾರೆ ಅನ್ನೋ ವಿವಾದ ಈಗ ಪೂಂಜಾ ಅವರ ಹೆಗಲಿಗೆ ಸುತ್ತಿಕೊಂಡಿದೆ. ಈ ದುಡ್ಡಿನ ಮೂಲ ಯಾವುದು ಎನ್ನುವುದೇ ದೂರುದಾರರ ಏಕೈಕ ಪ್ರಶ್ನೆ!
ಬಳಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಹರೀಶ್ ಪೂಂಜರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಹೊಗಳುವ ಭರದಲ್ಲಿ ಶಾಸಕರ ಸಾಧನೆ ಮತ್ತು ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ನೋಡಿರುವ ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಬಳಂಜರವರು ತಮ್ಮ ಭಾಷಣದಲ್ಲಿ ಶಾಸಕರ ಸಾಧನೆಯನ್ನು ವರ್ಣಿಸುತ್ತಾ, “ಶಾಸಕ ಹರೀಶ್ ಪೂಂಜರವರ ಮನೆಗೆ ನಾನು ಹೋಗಿದ್ದೆ. ಪೂಂಜರವರು ಒಳಗೆ ಹೋಗಿ 10,000ರೂ ಹಣವನ್ನು ಒಂದು ಹೆಂಗಸಿಗೆ ಕೊಟ್ಟರು. ಬಳಂಜದ ಬಾಲಕೃಷ್ಣ ಪೂಜಾರಿ ಅವರು ಹೋಗಿದ್ದರು ಅವರಿಗೂ 10,000 ರೂ ಕೊಟ್ಟರು” ಎಂಬ ಹೇಳಿಕೆಯೊಂದನ್ನು ನೀಡಿದರು. ಈ ವ್ಯಕ್ತಿಯ ಈ ಹೇಳಿಕೆಗೆ ಅಲ್ಲೇ ಇದ್ದ ಶಾಸಕರು ಕೂಡಾ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ, ತಮ್ಮ ಸಮ್ಮತಿಯನ್ನು ನೀಡಿದ್ದಾರೆ.
ಆದುದರಿಂದ ಶ್ರಮಿಕ ಕಚೇರಿಯಲ್ಲಿ ಹಾಗೂ ಶಾಸಕರ ಮನೆಯಲ್ಲಿ ಈ ರೀತಿಯ ಚೀಲಗಳಲ್ಲಿ ಹಣವಿರುವ ಎಲ್ಲಾ ಸಂಭವವಿರುವುದರಿಂದ ಈ ಕೂಡಲೇ ಶಾಸಕರ ಕಚೇರಿ ಮತ್ತು ಮನೆಯ ಶೋಧ ನಡೆಸಬೇಕಾಗಿ ಕೋರುತ್ತೇವೆ, ಈ ರೀತಿ ಬಂದವರಿಗೆ 10,000ರೂ, 20,000ರೂ ಹಣವನ್ನು ಶಾಸಕರು ನೀಡುತ್ತಾರೆಂದರೆ ಅವರಲ್ಲಿ ಆದಾಯಕ್ಕೆ ಮೀರಿದ ಹಣವಿರಬೇಕು ಆ ಹಣದ ಮೂಲ ಬಹಿರಂಗವಾಗಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ಅವರ ಹೇಳಿಕೆ ಆಧಾರವನ್ನು ಪರಿಗಣಿಸಿ, ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಕೇಸು ದಾಖಲಿಸಿ ಅವರ ಮನೆ ಮತ್ತು ಕಚೇರಿಯ ಶೋಧ ಕಾರ್ಯ ನಡೆಸ ಬೇಕೆಂದು ಮನವಿ ಮಾಡಲಾಗಿದೆ.
ಹರೀಶ್ ವೈ ಚಂದ್ರಮ ಬಳೆಂಜರವರನ್ನು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಕಮ್ಯುನಿಸ್ಟ್ ಪಕ್ಷದ ಸದಸ್ಯ ಶೇಖರ್ ಎಂಬುವವರು ಎಸಿಬಿ,ಇಡಿಗೆ ಕೇಸು ದಾಖಲಿಸಿದ್ದಾರೆ.