ಇಳಿ ವಯಸ್ಸಿನ ಮುದುಕನ ಮನದಾಳದ ಬಯಕೆ!! ಸಚಿವೆಯನ್ನು ಅಡ್ಡಗಟ್ಟಿ ಮದುವೆ ಮಾಡಿಸಲು ಅಂಗಲಾಚುವ ದೃಶ್ಯ ವೈರಲ್

Share the Article

ಮೇಡಂ ಮೇಡಂ ನಾನು ಒಬ್ಬಂಟಿ,ದಯಮಾಡಿ ನನಗೆ ಮದುವೆ ಮಾಡಿಸಿ ಮೇಡಂ ಎಂದು ವೃದ್ಧನೊಬ್ಬ ಸಚಿವೆಯ ಬಳಿ ಅಂಗಲಾಚುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರಪ್ರದೇಶದ ಸಚಿವೆ ರೋಜಾ ಅವರೇ ಇಲ್ಲಿ ಹೊಸತೊಂದು ತಲೆನೋವಿಗೆ ಬಲಿಯಾದವರು. ಕಾರ್ಯಕ್ರಮವೊಂದರ ನಿಮಿತ್ತ ಗ್ರಾಮಗಳ ಭೇಟಿಗೆ ತೆರಳಿದ್ದ ವೇಳೆ, ಅಲ್ಲಿನ ಗ್ರಾಮವೊಂದರಲ್ಲಿ ವೃದ್ಧರೊಬ್ಬರು ಸಚಿವೆಗೆ ಎದುರಾಗಿದ್ದು, ದಯಮಾಡಿ ನನಗೊಂದು ಮದುವೆ ಮಾಡಿಸಿ ಮೇಡಂ ಎಂದು ಅಂಗಲಾಚಿದ್ದು, ಹೊಸತೊಂದು ತಲೆನೋವಿನಿಂದ ಸಚಿವೆಗೆ ಆಘಾತವಾಗಿದೆ.

ಈ ವೇಳೆ ವೃದ್ಧನನ್ನು ಸಮಾಧಾನ ಮಾಡಿದ ಸಚಿವೆ, ನಿಮಗೆ ಪಿಂಚಣಿ ಸೌಲಭ್ಯವೆಲ್ಲ ಸರಿಯಾಗಿ ಸಿಗುತ್ತಿದೆಯೇ, ನಿಮ್ಮ ಆರೋಗ್ಯ ಹೇಗಿದೆ ಎಂದೆಲ್ಲಾ ಯೋಗ ಕ್ಷೇಮ ವಿಚಾರಿಸಿದ್ದಾರೆ. ಆದರೂ ಪಟ್ಟು ಬಿಡದ ವೃದ್ಧ ಕಾಲಿಗೆ ಬಿದ್ದು ಬೇಡಿಕೊಳ್ಳಲು ಮುಂದಾಗಿದ್ದು ಈ ವೇಳೆ ಮದುವೆ ಮಾಡಿಸುವುದು ನಾವಲ್ಲ ಎಂದು ಹೇಳಿ ಸಚಿವೆ ಮುಂದುವರಿದರು. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಳಿ ವಯಸ್ಸಿನಲ್ಲಿ ಮುದುಕನ ಬಯಕೆಗೆ ಹೆಗಲು ಕೊಡುವವರು ಯಾರು ಎನ್ನುವ ತಮಾಷೆಯ ಪ್ರಶ್ನೆಯೊಂದು ಎದ್ದಿದೆ.

Leave A Reply