ಡಿಕೆಶಿ ಹುಟ್ಟುಹಬ್ಬ ಆಚರಣೆ ವೇಳೆ ಪಕ್ಕದಲ್ಲಿದ್ದರೂ ಕೇಕ್ ತಿನ್ನಿಸದ ಪ್ರಿಯಾಂಕ ಮೇಡಂ !! | ಕನಕಪುರ ಬಂಡೆಯನ್ನು “ಹರಕೆಯ ಕುರಿ” ಎಂದು ಲೇವಡಿ ಮಾಡಿದ ಬಿಜೆಪಿ

ಡಿಕೆಶಿ ಹುಟ್ಟುಹಬ್ಬದ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಕ್ ತಿನ್ನಿಸದಿರುವುದು ಇದೀಗ ಬಿಜೆಪಿಗೆ ಟೀಕಾಸ್ತ್ರಗಳಿಗೆ ಬದಲಾಗಿದೆ. ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿಶಿ ಶಿವಕುಮಾರ್ ಅವರನ್ನು ಹರಕೆಯ ಕುರಿ ಎಂದು ಕರೆದಿದ್ದು, ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿ ಇಡುತ್ತಾರೆ ಎಂದಿದೆ.

 

ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕಾ ಗಾಂಧಿಗೆ ಸೌಜನ್ಯವಿಲ್ಲ, ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು? ಎಂದು ಪ್ರಶ್ನಿಸಲಾಗಿದೆ.

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಕಲಿ ಗಾಂಧಿ ವಂಶದವರು ಡಿಕೆ ಶಿವಕುಮಾರ್ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗ್ಗಿದ್ದು ಅಸಹಾಯಕತನದ ಪರಾಮವಧಿಯಲ್ಲದೆ ಮತ್ತೇನು? ಎಂದು ಕೇಳಿದೆ.

ಕೇಕ್ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್ ದಾಳಿ, ಎಂಬಿ ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಮತ್ತು ಬಾಣದ ಇತ್ತೀಚಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಶಿವಕುಮಾರ್ ಅವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ? ಎಂದು ಬಿಜೆಪಿ ಹೇಳಿದೆ.

Leave A Reply

Your email address will not be published.