ನಿಮ್ಮ ಮಗುವನ್ನು ಶಾಲೆಗೆ ಸೇರಿಸಲು ತರಗತಿ ಮತ್ತು ವಯಸ್ಸಿನ ಲೆಕ್ಕಾಚಾರ ಹೀಗಿದೆ | ಯಾವ ಶಾಲೆಯಲ್ಲಿ ಯಾವ ವಯಸ್ಸಿಗೆ ದಾಖಲಾತಿ, ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ

ಶಿಕ್ಷಣ ಅತ್ಯಂತ ಮಹತ್ವ ಪೂರ್ಣವಾಗಿರುವಂತದ್ದು. ಶಾಲೆಗಳು ಪ್ರಾರಂಭವಾಗುವ ಮೊದಲು ಪೋಷಕರು ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿರುತ್ತಾರೆ. ಈ ಗೊಂದಲಗಳ ನಿವಾರಣೆಗೆ ಕೆಲವೊಂದು ಸಲಹೆಯನ್ನು ಈ ಕೆಳಗೆ ನೀಡಲಾಗಿದೆ.

 

ಸರ್ಕಾರಿ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ಅನುದಾನಿತ ಶಾಲೆಗಳು, ಅನುದಾನ ರಹಿತ ಶಾಲೆಗಳು ರಾಜ್ಯದಲ್ಲಿವೆ.

ಈ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ ಮತ್ತು ಸಿಬಿಎಸ್‌ಸಿ, ಐಸಿಎಸ್‌ಸಿ, ಕೇಂದ್ರಿಯ ವಿದ್ಯಾಲಯಗಳಿಗೆ ಮಕ್ಕಳನ್ನು ದಾಖಲಿಸಲು ಎಷ್ಟು ವಯಸ್ಸಾಗಿರಬೇಕು ಅನ್ನೋ ಗೊಂದಲಗಳಿವೆ. ಈ ಗೊಂದಲಗಳಿಗೆ ಸರಿಯಾದ ಮಾಹಿತಿ ಇಲ್ಲಿದೆ.

ಯಾವ ವಯಸ್ಸಿನಿಂದ ಯಾವ ವಯಸ್ಸಿನ ಮಕ್ಕಳನ್ನು ದಾಖಲಿಸಬಹುದು.

ವಯಸ್ಸು ತರಗತಿ

3.5 ವರ್ಷ ರಿಂದ 4.5 ವರ್ಷ ಎಲ್ ಕೆಜಿ(ಜೂನಿಯರ್ ಕೆಜಿ)
4.5 ವರ್ಷ ರಿಂದ 5.5 ವರ್ಷ ಯು ಕೆಜಿ(ಸೀನಿಯರ್ ಕೆಜಿ)
5.5 ವರ್ಷ ರಿಂದ 7 ವರ್ಷ ಒಂದನೇ ತರಗತಿ

ರಾಜ್ಯ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳು ಜೂನ್ 1ನೇ ತಾರಿಕಿನ ಲೆಕ್ಕದಲ್ಲಿ ಎಲ್‌ಕೆಜಿಗೆ ಸೇರಿಸಲು 3.5 ವರ್ಷ – 4.5 ವರ್ಷವನ್ನು, ಯುಕೆಜಿ ಸೇರಿಸಲು 4.5 ವರ್ಷ – 5.5ವರ್ಷ, ಒಂದನೇ ತರಗತಿಗೆ ದಾಖಲಿಸಲು 5.5 ವರ್ಷ – 7 ವರ್ಷ ವಯಸ್ಸನ್ನು ನಿಗದಿಯಾಗಿದೆ. ಇನ್ನು ಖಾಸಗಿ ಶಾಲೆಗಳು ಪ್ರೀ ನರ್ಸರಿ ಗೆ 2.5-3.5 ವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳುತ್ತಾರೆ.

ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ದಾಖಲಾತಿ ಅನ್ವಯ ವಯಸ್ಸು ಮಾರ್ಚ್ 31 ಕ್ಕೆ ಮಗುವಿನ ವಯಸ್ಸು ಒಂದನೇ ತರಗತಿಗೆ 6 ವರ್ಷ ಪೂರ್ಣವಾಗಿರಬೇಕು. ಎಲ್‌ಕೆಜಿಗೆ 4ರಿಂದ5 ವರ್ಷ, ಯುಕೆಜಿಗೆ 5ರಿಂದ6 ವರ್ಷ ಮತ್ತು 6 ವರ್ಷದಿಂದ 7 ವರ್ಷದ ಮಕ್ಕಳಿಗೆ ಒಂದನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಬಹುದು ಎಂದು ತಿಳಿಸುತ್ತದೆ.

ಇನ್ನು ಸಿಬಿಎಸ್ಸಿ ಮತ್ತು ಐಸಿಎಸ್ಸಿ ಶಾಲೆಗಳು ಪ್ರೀ ನರ್ಸರಿ, ಎಲ್ ಕೆಜಿ ಮತ್ತು ಯುಕೆಜಿ ಹಾಗೂ ಒಂದನೇ ತರಗತಿಯ ದಾಖಲಾತಿಯನ್ನು ಮಾಡಿಕೊಳ್ಳುತ್ತದೆ. ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳು ಆಗಸ್ಟ್ 31 ಅನುಗುಣವಾಗಿ ಸಾಮಾನ್ಯ ಕೇಂದ್ರಿಯ ವಿದ್ಯಾಲಯದ ಮಾದರಿಯಲ್ಲಿಯೇ ದಾಖಲಾತಿಯನ್ನು ಒದಗಿಸುತ್ತವೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಗುವಿನ ವಯಸ್ಸು 3 ರಿಂದ18ರ ವರೆಗೂ ಇರುವುರಿಂದ 5+3+3+4 ಎಂದು ನಿಗದಿ ಮಾಡಲಾಗಿದೆ. ಅಂದರೆ ಮೂರನೇ ವರ್ಷಕ್ಕೆ ಕಲಿಕೆ ಪ್ರಾರಂಭವಾಗಿ 6 ನೇ ವಯಸ್ಸಿಗೆ ಮಕ್ಕಳು ಒಂದನೇ ತರಗತಿಗೆ ಬರಲಿದ್ದಾರೆ. ನರ್ಸರಿಯಿಂದ ಎರಡನೇ ತರಗತಿಗೆ (5), ಮೂರರಿಂದ ಐದನೇ ತರಗತಿಗೆ(3) ಆರನೇ ತರಗತಿಯಿಂದ ಎಂಟನೇ ತರಗತಿವರೆಗೂ (3) ಮತ್ತು ಒಂಭತ್ತನೇ ತರಗತಿಯಿಂದ ಹನ್ನೆಡನೇ ತರಗತಿ (4) ಎಂದು ವಿಭಾಗಿಸಿದೆ.

“ಮಕ್ಕಳ ದೈಹಿಕ ಮತ್ತು ಮಾನಸಿಕ ಅಂದರೆ ಮೆದುಳಿನ ವಯಸ್ಸು ವ್ಯತ್ಯಾಸವಿರುತ್ತದೆ. ಮಗುವಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ನೇರವಾಗಿ ತರಗತಿಗೆ ದಾಖಲಾತಿ ಮಾಡಿದರೆ ಮಗುವಿನ ಕಲಿಕೆಗೆ ಶ್ರಮವಾಗಲಿದೆ. ಮಗುವಿನ ವಯೋಮಾನದಲ್ಲಿ ಸಣ್ಣ ಪ್ರಮಾಣದ ವ್ಯತ್ಯಯಗಳಿರುತ್ತವೆ. ಮುಂದಿನ ತರಗತಿಗೆ ಮಕ್ಕಳನ್ನು ದಾಖಲಿಸುವ ಬದಲು ಹಿಂದಿನ ತರಗತಿಗೆ ದಾಖಲಿಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಪೋಷಕರು ಕಲ್ಪಿಸಿಕೊಡಬೇಕಿದೆ,” ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಡಿ. ಶಶಿಕುಮಾರ್
ಹೇಳುತ್ತಾರೆ.

ರಾಜ್ಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ನೇರವಾಗಿ ಸೇರಿಕೊಳ್ಳಲು ಅವಕಾಶವಿರುವುದರಿಂದ 5.5 ವರ್ಷದಿಂದ 7 ವರ್ಷದ ಮಗುವನ್ನು ಶಾಲೆಗೆ ಸೇರಿಸಬಹುದು. ಕೆಲವು ಖಾಸಗಿ ಶಾಲೆಗಳು ನೇರವಾಗಿ ಒಂದನೇ ತರಗತಿಗೆ ಮಗುವನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತವೆ. ಇನ್ನು ಕೆಲವು ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಓದದಿದ್ದರೂ ನೇರವಾಗಿ ಒಂದನೇ ತರಗತಿಗೆ ದಾಖಲಿಸಿಕೊಳ್ಳುತ್ತಾರೆ. ಏನೇ ಆದರೂ ಸರ್ಕಾರಿಯೋ, ಕೇಂದ್ರಿಯ ಶಾಲೆಯೋ, ಖಾಸಗಿ ಶಾಲೆಯೋ ಎಲ್ಲಿಯಾದರೂ ಮಕ್ಕಳು ಶಿಕ್ಷಣವನ್ನು ಪಡೆಯ ಬೇಕು. ಏಕೆಂದರೆ ಶಿಕ್ಷಣ ಮಕ್ಕಳ ಹಕ್ಕು.

Leave A Reply

Your email address will not be published.