ನನಗೆ ಮುಸ್ಲಿಂರ ವೋಟ್ ಬೇಡ, ಹಿಂದೂಗಳ ಮತ ಮಾತ್ರ ಸಾಕು- ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ
ಮಂಗಳೂರು : ಚುನಾವಣೆಯಲ್ಲಿ ನನಗೆ ಮುಸ್ಲಿಂ ವೋಟುಗಳು ಬೇಡ. ತಾಕತ್ತಿನಿಂದ ಹೇಳುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ಹಿಂದೂಗಳ ವೋಟ್ ಸಾಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ ಆದರೆ ಆಗ ತಾಕತ್ತಿನಿಂದ ಹೇಳೇನೆ, ನನಗೆ ಮುಸ್ಲಿಮರ ಓಟ್ ಬೇಡ, ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು, ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು, ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳುತ್ತೇನೆ. ನನಗೆ ಮುಸ್ಲಿಮರ ಮತಗಳು ಬೇಡ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಆಜಾನ್ ವಿವಾದಗಳ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರೊಬ್ಬರು ಟೀಕೆಗಳಿಗೆ ಗುರಿಯಾಗುವಂತ ಹೇಳಿಕೆಯೊಂದನ್ನ ನೀಡಿದ್ದಾರೆ.