ಚಂದನವನದ ಸೂಪರ್ ಹಿಟ್ ಚಿತ್ರ ‘ ಕರಿಯ’ ಸಿನಿಮಾ ನಿರ್ಮಾಪಕ ಭೀಕರ ಅಪಘಾತದಲ್ಲಿ ನಿಧನ |

ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

 

‘ಕರಿಯ’ ಸಿನಿಮಾ ನಿರ್ಮಾಣ ಮಾಡಿ ಬಾಲರಾಜ್ ಅವರು ಯಶಸ್ಸು ಕಂಡಿದ್ದರು. ಅವರ ನಿಧನದ ಸುದ್ದಿ ಕೇಳಿ ಸ್ಯಾಂಡಲ್‌ವುಡ್‌ನ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಭಾನುವಾರ (ಮೇ 15) ಬೆಳಗ್ಗೆ ಜೆ.ಪಿ. ನಗರದ ಅವರ ನಿವಾಸದ ಬಳಿ ವಾಕಿಂಗ್‌ಗೆ ತೆರಳಿದ್ದಾಗ ಅಪಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆನೇಕಲ್ ಬಾಲರಾಜ್ ಅವರಿಗೆ 58 ವರ್ಷ ವಯಸ್ಸಾಗಿತ್ತು.

ಪ್ರೇಮ್ ನಿರ್ದೇಶನದ ‘ಕರಿಯಾ’, ಶ್ರೀನಿವಾಸ್ ಪ್ರಭು ನಿರ್ದೇಶನ ಮಾಡಿದ್ದ ‘ಕರಿಯಾ 2’, ‘ಗಣಪ’ ಸೇರಿದಂತೆ ಅನೇಕ ಸಿನಿಮಾಗಳನ್ನು ಆನೇಕಲ್ ಬಾಲರಾಜ್ ಅವರು ನಿರ್ಮಾಣ ಮಾಡಿದ್ದರು.

Leave A Reply

Your email address will not be published.