ಬೆಳ್ತಂಗಡಿ: ಅಕ್ರಮ ಗೋಸಾಗಾಟ, ವಾಹನ ತಡೆದ ಪಿಎಸ್‌ಐ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಗ್ಯಾಂಗ್ !!

ಬೆಳ್ತಂಗಡಿ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವೊಂದು ಇಂದು ಬೆಳಗ್ಗಿನ ಜಾವ ಗಸ್ತು ತಿರುಗುತ್ತಿದ್ದ ಪುಂಜಾಲಕಟ್ಟೆ ಪಿಎಸ್‌ಐ ಸುಕೇತ್, ಸಿಬ್ಬಂದಿ ನವೀನ್, ಸಂದೀಪ್ ವಾಹನ ನಿಲ್ಲಿಸಲು ಸೂಚಿಸಿದಾಗ ಗಾಡಿ ನಿಲ್ಲಿಸದೆ ಪಿಎಸ್‌ಐ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ವಾಮದಪದವು ಕುದ್ಕೊಳಿ ಎಂಬಲ್ಲಿ ನಡೆದಿದೆ.

 

ರೌಂಡ್ಸ್ ನಲ್ಲಿ ಇರುವಾಗ ಎದುರಿನಿಂದ ಅನುಮಾನಾಸ್ಪದವಾಗಿ ಬರುತ್ತಿದ್ದ ಗೂಡ್ಸ್ ವಾಹನ ನಿಲ್ಲಿಸಲು ಪಿಎಸ್‌ಐ ಸೂಚಿಸಿದ್ದಾರೆ. ಆದರೆ ಆ ವಾಹನದಲ್ಲಿದ್ದವರು ವಾಹನ ನಿಲ್ಲಿಸದೆ ಪಿಎಸ್‌ಐ ಅವರಿಗೆ ಡಿಕ್ಕಿ ಹೊಡೆದಿದೆ. ನಂತರ ಸಿಬ್ಬಂದಿಗಳು ವಾಹನ ಅಡ್ಡಹಾಕಿದಾಗ ಆರೋಪಿಗಳು ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿತ್ತು. ವಾಹನದಲ್ಲಿದ್ದ ದನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಪಿಎಸ್‌ಐ ಸುಕೇತ್ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ವಾಹನದಲ್ಲಿ ಮೂರು ದನಗಳಿದ್ದು, ಒಂದು ದನ ಹಾಲು ಕೊಡುವುದು, ಇನ್ನೊಂದು ಗಬ್ಬದ ದನ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ
ವಾಹನದಲ್ಲಿ ಇಬ್ಬರು ಆರೋಪಿಗಳಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.