ಸಾವಿನ ಮನೆಗೂ- ಬೆಲ್ಲಿ ಡ್ಯಾನ್ಸ್ ಗೂ ಎತ್ತಣಿಂದೆತ್ತ ಸಂಬಂಧ! ಸೂತಕದ ಮನೆಯಲ್ಲಿ ಡ್ಯಾನ್ಸೋ ಡ್ಯಾನ್ಸು!

ಒಂದು ಮನೆಯಲ್ಲಿ ‘ಸಾವು’ ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸುತ್ತದೆ. ಯಾರ ಮುಖದಲ್ಲಾದರೂ ಒಂದು ಇಂಚಿನ ನಗೆ ಕೂಡಾ ಇರುವುದಿಲ್ಲ. ಮನೆ ಮಂದಿ ರೋಧಿಸುತ್ತಾ ಇರುತ್ತಾರೆ…ಇದೆಲ್ಲಾ ಸಾಮಾನ್ಯವಾಗಿ ಒಂದು ಸಾವಿನ ಮನೆಯಲ್ಲಿ ಕಂಡು ಬರುವ ಸನ್ನಿವೇಶ.

 

ಇತ್ತೀಚೆಗೆ ಈ ಅಳು ಕೂಡಾ ನಕಲೀಗೊಳ್ಳುತ್ತಿದೆ.
ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಸಾವಿನ ಮನೆಯಲ್ಲಿ ಅಳಲೆಂದೇ ಬಾಡಿಗೆ `ಅಳು’ವ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಇನ್ನು ಕೆಲವು ಕಡೆಯ ಸಂಪ್ರದಾಯಗಳಲ್ಲಿ ಸತ್ತವರನ್ನು ಪಟಾಕಿ ಹಚ್ಚಿ ,ತಮಟೆ ಬಾರಿಸುತ್ತಾ, ಡ್ಯಾನ್ಸ್ ಮಾಡಿ ಸಂತೋಷದಿಂದ ಅವರನ್ನು ಬೀಳ್ಕೊಡುಗೆ ಮಾಡುತ್ತಾರೆ. ಆದರೆ, ಇಲ್ಲೊಂದು ಕಡೆ ಸಾವಿನ ಮನೆಯಲ್ಲಿ ವಿಲಕ್ಷಣ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಮನೆಯಲ್ಲಿ ಮಹಿಳೆ ಸಖತ್ ಬೆಲ್ಲಿ ಡ್ಯಾನ್ಸ್ ಮಾಡಿ ಎಲ್ಲರೂ ನಿಬ್ಬೆರರಾಗುವಂತೆ ಮಾಡಿದ್ದಾಳೆ.

ಆ ಒಂದು ಮನೆಯಲ್ಲಿ ಸಾವು ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯು ಸಲ್ಮಾನ್ ಖಾನ್ ನಟನೆಯ ವಾಂಟೆಡ್ ಚಿತ್ರದ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಇದಕ್ಕೆ ತಕ್ಕಂತೆ, ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದವರು ದುಃಖವನ್ನು ಬದಿಗಿಟ್ಟು ಆಕೆಯ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿರುವ ದೃಶ್ಯಗಳು ಈ ವಿಡಿಯೋ ತುಣುಕಿನಲ್ಲಿವೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ತುಣುಕಿಗೆ “ಅವರಿಗೆಲ್ಲಾ ಸಂತೋಷವಾಗಿದೆಯೇ ಅಥವಾ ದುಃಖವಾಗಿದೆಯೇ?’ ಎಂಬ ಪ್ರಶ್ನೆಯೊಂದಿಗೆ ಶೀರ್ಷಿಕೆ ನೀಡಲಾಗಿದೆ.

ವಿಶ್ವದಾದ್ಯಂತ ಸಾವಿರಾರು ಮಂದಿ ಈ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ತಮ್ಮ ಪ್ರೀತಿ ಪಾತ್ರರು ಸಾವನ್ನಪ್ಪಿದರೆ ಜನರು ಸಂತಾಪ ಸೂಚಿಸುತ್ತಾರೆ. ಅವರೆಲ್ಲಾ ತಮ್ಮನ್ನು ಅಗಲಿದ ವ್ಯಕ್ತಿಗೆ ದುಃಖತಪ್ತ ವಿದಾಯ ಹೇಳುತ್ತಾರೆ. ಆದರೆ, ಈ ವೀಡಿಯೋ ಇವೆಲ್ಲಕ್ಕಿಂತ ವಿರುದ್ಧವಾಗಿದೆ. ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಾವನ್ನಪ್ಪಿದ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.

Leave A Reply

Your email address will not be published.