ಅಕ್ಷಯ್ ಕುಮಾರ್ ಗೆ ಮತ್ತೆ ಕೊರೊನಾ ಕಂಟಕ

ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಶುರುವಾಗಿದೆ. ಮುಂಬೈನಲ್ಲೂ ಸೋಂಕಿನ ಪ್ರಮಾಣ ಹೆಚ್ಚಿದ್ದು, ಸದ್ಯ ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಕೋವಿಡ್ ದೃಢಪಟ್ಟಿದೆ.

 

ಈ ಬಗ್ಗೆ ಸ್ವತಃ ಅಕ್ವಯ ಕುಮಾರ್ ಶನಿವಾರ (ಮೇ 14) ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕೇನ್ಸ್ 2022 ರಲ್ಲಿ ಇಂಡಿಯಾ ಪೆವಿಲಿಯನ್‌ನಲ್ಲಿ ನಮ್ಮ ಸಿನಿಮಾಗಳು ಬೇರೂರುವುದನ್ನು ನೋಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೆ. ಆದರೆ, ದುಃಖದ ವಿಚಾರವೆನೆಂದರೆ, ನನಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ನಾನು ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಕೇನ್ಸ್‌ನಲ್ಲಿ ಭಾಗವಹಿಸುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ,” ಎಂದು ನಟ ಅಕ್ಷಯ್ ಕುಮಾರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನಲೆ ಕೇನ್ಸ್ ಚಲನಚಿತ್ರತೋತ್ಸವ ಭೇಟಿಯನ್ನು ರದ್ದು ಗೊಳಿಸಿದ್ದಾರೆ. ನಟ ಅಕ್ಷಯ್ ಕುಮಾರ್‌ಗೆ ಎರಡನೇ ಬಾರಿ ಸೋಂಕು ತಗುಲಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

Leave A Reply

Your email address will not be published.