ವೈವಾಹಿಕ ಜೀವನವನ್ನು ಯಶಸ್ವಿಗೊಳಿಸುವ ಸುಲಭ ಸೂತ್ರಗಳು!!!

ಮದುವೆ ಎನ್ನುವುದು ಏಳು ಜನ್ಮಗಳ ಅನುಬಂಧ. ಮದುವೆ ಆಗುವುದು ಸುಲಭ. ಆದರೆ ಅದನ್ನು ನಿಭಾಯಿಸುವುದು‌ ಕಷ್ಟ. ಮದುವೆಯ ನಂತರ ಜೀವನವು ಇದ್ದಕ್ಕಿದ್ದಂತೆ ಬದಲಾಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಈ ಜವಾಬ್ದಾರಿ ಹೊರುವ ಸಮಯದಲ್ಲಿ ಕೆಲವೊಮ್ಮೆ ಈ ಜೋಡಿಗಳ ಜೀವನದಲ್ಲಿ ಸಾಮರಸ್ಯದ ಕೊರತೆಗೆ ಉದ್ಭವವಾಗಬಹುದು. ಹಾಗಾದರೆ ವೈವಾಹಿಕ ಜೀವನವನ್ನು ಉತ್ತಮಗೊಳಿಸಲು ಏನು ಮಾಡಿದರೆ ಉತ್ತಮ ? ಬನ್ನಿ ತಿಳಿಯೋಣ.

 

ಮದುವೆಯ ಈ ಬಂಧ ಯಶಸ್ವಿಗೊಳಿಸಲು ಎರಡೂ ಕಡೆಯಿಂದ ಪ್ರಯತ್ನ ನಡೆಯಬೇಕು. ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಹಾಗಾದರೆ ಮತ್ಯಾಕೆ ತಡ ಬನ್ನಿ ಅದೇನೆಂದು ತಿಳಿಯೋಣ.

ವೈವಾಹಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ, ಪರಸ್ಪರರ ಬಗ್ಗೆ ಪ್ರೀತಿ ಮತ್ತು ಸ್ನೇಹ ಹೆಚ್ಚಾಗುತ್ತದೆ. ಇದರಿಂದ ಸಂಬಂಧವು ಆಳವಾಗಿರುತ್ತದೆ.

ಗಂಡ ಹೆಂಡತಿ ಇಬ್ಬರಲ್ಲಿ ಸ್ನೇಹವಿಲ್ಲದಿದ್ದರೆ ಪ್ರೀತಿಯ ಕೊರತೆ ಖಂಡಿತಾ ಇರುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಸ್ನೇಹದ ಸಂಬಂಧವನ್ನು ಹೊಂದಿರುವುದು ಸಹ ಬಹಳ ಮುಖ್ಯ. ಮೊದಲು ಸ್ನೇಹಿತರಾಗಿ ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಗಂಡ ಹೆಂಡತಿ ಪ್ರತಿಯೊಂದು ವಿಷಯದ ಬಗ್ಗೆ ಪರಸ್ಪರ ಮುಕ್ತವಾಗಿ ಮಾತನಾಡುವುದು ಮುಖ್ಯ. ಮುಕ್ತವಾಗಿ ಮಾತನಾಡಿದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದರಿಂದ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.

ಒಬ್ಬರಿಗೊಬ್ಬರು ಮಾಡಿದ ಸಣ್ಣ ಮತ್ತು ದೊಡ್ಡ ಪ್ರಯತ್ನಗಳನ್ನು ಯಾವಾಗಲೂ ಮೆಚ್ಚಿ. ಸಣ್ಣ ಕ್ಷಣಗಳನ್ನು ಮುಕ್ತವಾಗಿ ಎಂಜಾಯ್ ಮಾಡಿ ಮತ್ತು ಸಂತೋಷವಾಗಿರಿ. ಇದರಿಂದ ನಿಮ್ಮ ಜೀವನ ನಿಜವಾಗಿಯೂ ಸುಖವಾಗಿರುತ್ತದೆ.

ನಾವು ಸಂಗಾತಿಯೊಂದಿಗೆ ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ಸಂಪರ್ಕ ಹೊಂದುವುದು ಮುಖ್ಯ. ಭಾವನಾತ್ಮಕವಾಗಿ ಸಂಬಂಧ ಹೊಂದಿದರೆ ಅದರಿಂದ ಅನ್ಯೋನ್ಯವಾಗಿ ಬಾಳಲು ಸಹಾಯ ಮಾಡುತ್ತದೆ. ಸಂಬಂಧವೂ ಉತ್ತಮವಾಗಿರುತ್ತದೆ.

ಸಾಧ್ಯವಾದಷ್ಟು ಗಂಡ ಹೆಂಡತಿ ಸಮಯವನ್ನು ಜೊತೆಯಾಗಿ ಕಳೆಯಲು ಪ್ರಯತ್ನಿಸಿ. ಯಾಕೆಂದರೆ ಇಬ್ಬರು ಜೊತೆಯಾಗಿ ಸಮಯ ಕಳೆದಷ್ಟು ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಇದರಿಂದ ಉತ್ತಮ ದಾಂಪತ್ಯ ಜೀವನ ನಿಮ್ಮದಾಗುತ್ತದೆ.

ಒಮ್ಮೊಮ್ಮೆ ಗಂಡ ಹೆಂಡ್ತಿ ವಿಭಿನ್ನ ಇಷ್ಟಗಳನ್ನು ಹೊಂದಿರುತ್ತಾರೆ. ಇಬ್ಬರ ಯೋಚಿಸುವ ದಿಕ್ಕೇ ಬೇರೆ ಆಗಿರುತ್ತದೆ. ಉದಾಹರಣೆಗೆ ಇಂತಹಾ ಕಾಂಟ್ರಾಸ್ಟ್ ರುಚಿ ಅಭಿರುಚಿ ಇದ್ದ ಸಂಸಾರ ಕೂಡಾ ನೆಟ್ಟಗೆ ನಡೆಯುತ್ತಿರುವುದನ್ನು ಕಾಣಬಹುದು.

ಒಂದು ಕಡೆ ಹೆಂಡತಿ ಸಾಹಿತ್ಯ ಪ್ರೇಮಿಯಾಗಿದ್ದು, ಓದುವುದು, ಹಾಡು ಕೇಳುವುದು, ಸಿನಿಮಾ ನೋಡುವುದು ಮುಂತಾದುವುಗಳನ್ನು ತೀವ್ರವಾಗಿ ಇಷ್ಟ ಪಡುತ್ತಿರುತ್ತಾಳೆ. ಆದರೆ ಗಂಡನಿಗೆ ಅದರ ಗಂಧ ಗಾಳಿ ಗೊತ್ತಿಲ್ಲ. ಅದರ ಬಗ್ಗೆ ತಿಳಿಸಿ ಹೇಳಿದರೂ ಆತ ಒಂದು ಬಾರಿ ಕೂಡಾ ಅದನ್ನು ತುದಿ ನಾಲಗೆಯಿಂದ ರುಚಿ ಕೂಡಾ ನೋಡಲು ಮನಸ್ಸು ಮಾಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೂಡಾ ಸಂಸಾರ ಮುರಿದು ಹೋಗುತ್ತೆ ಅನ್ನಬೇಕಿಲ್ಲ. ಅವರ ಇಷ್ಟವನ್ನು ಅವ್ರಿಗೆ ಬಿಟ್ಟು ಅವರನ್ನು ತಾಳಿಕೊಂಡರೆ ಅದೇ ದೊಡ್ಡ ಸಂಧಾನ.

ಆಗಾಗ್ಗೆ ಸಹಜ ಏರ್ಪಡುವ ಸಂಧಾನಗಳೆ ಸಂಸಾರ ಸರಿದೂಗಲು ಆಧಾರ

ಸಂಸಾರದಲ್ಲಿ ಸೋಲಲು ಕಲಿಯಬೇಕು. ಸೋಲುತ್ತ ಸೋಲುತ್ತ ಮಾತ್ರ ಗೆಲುವು ಪಡೆಯುವ ದೊಡ್ಡ ಕ್ಷೇತ್ರ ಏನಾದ್ರೂ ಇದ್ರೆ ಅದು ಸಂಸಾರ ಕ್ಷೇತ್ರ. ನಿನ್ನ ಹೆಗಲಿಗೆ ನನ್ನ ಹೆಗಲು, ನಿನ್ನ ಕಿರುಬೆರಳಿಗೆ ನನ್ನದನ್ನೂ ಉರುಲಾಗಿಸಿ ಮುಂದೆ ನಡೆ. ನಡಿಗೆ ಬೇಸರ ಆಗುವುದಿಲ್ಲ. ಸುಸ್ತಾದರೆ ಭುಜಕ್ಕೆ ಒರಗಲು, ತೋಳಿಗೆ ಭಾರ ಹಾಕಿ ತೂಕ ಇಳಿಸಲು ಸಹಪಥಿಕ ಇರ್ಥಾರಲ್ಲ ಸಮೀಪದಲ್ಲೇ.

Leave A Reply

Your email address will not be published.