ಕೆಜಿಎಫ್ 3 ಶೂಟಿಂಗ್ ಪ್ರಾರಂಭ ಹಾಗು ಬಿಡುಗಡೆಯ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

 

ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಕೆಜಿಎಫ್2 . ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಬಾಲಿವುಡ್ ಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೆಜಿಎಫ್​-2ನಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದು, ಇದೀಗ ಅಭಿಮಾನಿಗಳು ಕೆಜಿಎಫ್3 ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್​-3 ಚಿತ್ರದ ಶೂಟಿಂಗ್​ 2023ರ ಅಂತ್ಯದಲ್ಲಿ ಪ್ರಾರಂಭವಾಗಲಿದೆ. ನಟ ಯಶ್​ 2024ಕ್ಕೆ ಶೂಟಿಂಗ್​ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಎಡಿಟಿಂಗ್​ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಂಡು 2025ನೇ ವರ್ಷಕ್ಕೆ ಚಿತ್ರಮಂದಿರಗಳಿಗೆ ಕೆಜಿಎಫ್3 ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸಂದರ್ಶನವೊಂದರಲ್ಲಿ ಕೆಜಿಎಫ್’ ಸರಣಿಯ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ‘ಕೆಜಿಎಫ್ 3′ ಕುರಿತು ಮಾಹಿತಿ ನೀಡಿದ್ದಾರೆ. 2024ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಆಶಯ ಇದೆ’ ಎಂದಿದ್ದಾರೆ.

ಬೇರೆಬೇರೆ ಸಿನಿಮಾಗಳಲ್ಲಿ ಬರುವ ಪಾತ್ರಗಳನ್ನು ಈ ಸಿನಿಮಾದಲ್ಲಿ ತರಲು ಚಿಂತಿಸಿದ್ದೇವೆ. ಸ್ಪೈಡರ್ ಮ್ಯಾನ್ ಹಾಗೂ ಡಾಕ್ಟರ್ ಸ್ಟ್ರೇಂಜ್​ನಲ್ಲಿ ಬೇರೆ ಸಿನಿಮಾಗಳ ಪಾತ್ರಗಳು ಬಂದಿದ್ದವು. ನಾವು ಅದೇ ರೀತಿ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಜನರನ್ನು ನಾವು ತಲುಪಬಹುದು’ ಎಂದಿದ್ದಾರೆ ವಿಜಯ್.

Leave A Reply

Your email address will not be published.