ಚಿನ್ನ ಕೊಳ್ಳುವವರೇ ಗಮನಿಸಿ | ಇಂದು ತುಸು ಏರಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಎಷ್ಟು ?
ಚಿನ್ನ ಕೊಳ್ಳುವವರೇ ಇಂದು ನಿಮಗೆ ಚಿನ್ನ, ಬೆಳ್ಳಿ ಬೆಲೆ ಕೇಳಿದರೆ ಸ್ವಲ್ಪ ಬೇಸರ ಮೂಡಬಹುದು. ಇಂದು ಚಿನ್ನ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಹಾವು ಏಣಿ ಆಡುತ್ತಿದ್ದ ಚಿನ್ನ ಬೆಳ್ಳಿ ದರದಲ್ಲಿ ಮತ್ತೆ ಏರಿಕೆಯಾಗಿದೆ.
ಇಂದು ಮೇ 13ರ ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರದ ಬೆಲೆ 47,200 ರೂ. ದಾಖಲಾಗಿದೆ. ಈ ಮೂಲಕ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 450 ರೂ. ಏರಿಕೆ ಕಂಡಂತೆ ಆಗಿದೆ.
ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ ರೂ.51,490 ರೂಪಾಯಿ ದಾಖಲಾಗಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ 490 ರೂ. ಕಂಡಿದೆ. ನಿನ್ನೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಸಾಮಾನ್ಯವಾಗಿ ಗ್ರಾಹಕರಿಗೆ ಕಹಿ ಸುದ್ದಿಯಾಗಿದೆ.
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ
ಹೀಗಿದೆ :
ಬೆಂಗಳೂರು: ರೂ.47,200 ( 22 ಕ್ಯಾರೆಟ್) ರೂ. 51,490 (24 ಕ್ಯಾರೆಟ್)
ಚೆನ್ನೈ : ರೂ.48,350 ( 22 ಕ್ಯಾರೆಟ್) ರೂ. 52,750 (24 ಕ್ಯಾರೆಟ್ )
ದಿಲ್ಲಿ: ರೂ.47,200 (22 ಕ್ಯಾರಟ್) – ರೂ.51,490 (24 ಕ್ಯಾರೆಟ್)
ಹೈದರಾಬಾದ್: ರೂ.47,200 (22 ಕ್ಯಾರೆಟ್) – ರೂ.51,490 ( 24 ಕ್ಯಾರೆಟ್)
ಕೋಲ್ಕತ್ತಾ : ರೂ.47,200 (22ಕ್ಯಾರೆಟ್)- ರೂ.51,490 (24 ಕ್ಯಾರೆಟ್)
ಮಂಗಳೂರು : ರೂ. 47,200 (22 ಕ್ಯಾರೆಟ್)- ರೂ.51,490(24 ಕ್ಯಾರೆಟ್)
ಮುಂಬಯಿ : ರೂ.47,200 (22ಕ್ಯಾರೆಟ್)- ರೂ.51,490 (24 ಕ್ಯಾರೆಟ್)
ಮೈಸೂರು: ರೂ.47,200 (22 ಕ್ಯಾರೆಟ್) – ರೂ.51,490 (24 ಕ್ಯಾರೆಟ್)
ಬೆಳ್ಳಿಯ ದರ : ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ರೂ.60,800 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.65,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 65000 ರೂ. ಇದೆ.