ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಉದ್ಯೋಗವಕಾಶ

ಕರ್ಣಾಟಕ ಬ್ಯಾಂಕ್‌, ತಮ್ಮ ಶಾಖೆಗಳಲ್ಲಿ ಖಾಲಿ ಇರುವ ಗುಮಾಸ್ತ(ಕ್ಲರ್ಕ್) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

 

ವಿದ್ಯಾರ್ಹತೆ ಯಾವುದೇ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 60 ಅಂಕಗಳೊಂದಿಗೆ (ಪ್ರಥಮ ದರ್ಜೆ)/ ತತ್ಸಮಾನ ದರ್ಜೆಯ ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು.

ವಯೋಮಿತಿ ಮೇ 1, 2022ಕ್ಕೆ ಗರಿಷ್ಠ 26 ವರ್ಷಗಳು ವಯಸ್ಸಾಗಿರಬೇಕು. ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

ಆಯ್ಕೆ ವಿಧಾನ‌ ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಧಾರವಾಡ ಹುಬ್ಬಳ್ಳಿ, ಮಂಗಳೂರು, ಮುಂಬೈ, ಮೈಸೂರು, ನವದೆಹಲಿ ಮತ್ತು ಶಿವಮೊಗ್ಗ ಇವು‌ ಪರೀಕ್ಷಾ ಕೇಂದ್ರಗಳು.

ಮೇ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮೇ 21 ಕೊನೆ ದಿನ. ಆನ್‌ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿ, ಅರ್ಜಿ ಶುಲ್ಕ ಪಾವತಿಸಬೇಕು.

ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ವೆಬ್ ಸೈಟ್ ನ್ನು ಪರಿಶೀಲಿಸಿ (https://karnatakabank.com/sites/default/files/2022-05/KBL-Clerks-Notific…)

Leave A Reply

Your email address will not be published.