‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಮುಸ್ಕಾನ್ ಕುಟುಂಬ ವಿದೇಶದಲ್ಲಿ!
ಹಿಜಾಬ್ ವಿವಾದದ ಸಂಘರ್ಷ ಇತ್ತೀಚೆಗೆ ಕಡಿಮೆಯಾಗಿದೆ. ಆದರೂ ಬೆಂಕಿ ಆರಿದರೂ ಹೊಗೆ ಇದೆ ಅನ್ನುವಂತಿದೆ ಈಗಿನ ಪರಿಸ್ಥಿತಿ. ಈ ಹಿಜಾಬ್ ಸಂಘರ್ಷದ ಸಮಯದಲ್ಲಿ ಮಂಡ್ಯ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್, ‘ಅಲ್ಲಾಹು ಅಕ್ಬರ್’ ಅಂತ ಘೋಷಣೆ ಕೂಗಿದ್ದು, ದೇಶದಾದ್ಯಂತ ಭಾರೀ ಪ್ರಚಾರ ಪಡೆದಿತ್ತು. ಅನಂತರ ಆಕೆಗೆ ಮುಸ್ಲಿಂ ಸಂಘಟನೆಯಿಂದ ಭರಪೂರ ಹಣ ಹಾಗೂ ಗಿಫ್ಟ್ ದೊರಕಿತ್ತು.
ಈಗ ಈ ಮುಸ್ಕಾನ್ ಕುಟುಂಬ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಖಾಕಿಗೆ ಮಾಹಿತಿ ನೀಡದೆ ಮುಸ್ಕಾನ್ ಕುಟುಂಬ ಸೌದಿ ಪ್ರವಾಸಕ್ಕೆ ಹೊರಟಿದೆ ಎಂದು ಹೇಳಲಾಗಿದೆ.
ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25ರಂದು ಮುಸ್ಕಾನ್ ಕುಟುಂಬ ಸೌದಿಗೆ ತೆರಳಿದೆ ಎನ್ನಲಾಗಿದೆ. ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಪ್ರವಾಸ ಮಾಡಿರುವ ಬಗ್ಗೆ ಮಾಹಿತಿ ಇದ್ದು, ವಿದೇಶ ಪ್ರವಾಸದ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ
ಈ ಮುಸ್ಕಾನ್ ಕುಟುಂಬ ಕೈಗೊಂಡಿರುವ ವಿದೇಶ ಪ್ರವಾಸದಿಂದ ಮತ್ತಷ್ಟು ಅನುಮಾನ ಹುಟ್ಟಿಕೊಂಡಿದೆ. ಉಗ್ರ ಸಂಘಟನೆಯಿಂದ ಮುಸ್ಕಾನ್ ಮೆಚ್ಚುಗೆ ಪಡೆದಿದ್ದಳು. ಅಲ್ ಖೈದಾ ಸಂಘಟನೆಯ ನಾಯಕ ಮುಸ್ಕಾನ್ಗಳನ್ನು ಹಾಡಿ ಹೊಗಳಿ ಗುಣಗಾನ ಮಾಡಿದ್ದ.
ಮುಸ್ಕಾನ್ ಕುಟುಂಬಕ್ಕೆ ಉಗ್ರ ಸಂಘಟನೆಯ ನಂಟಿರಬಹುದೆಂದು ಹಿಂದು ಸಂಘಟನೆಗಳು ಆರೋಪಿಸಿವೆ. ಈ ನಡುವೆ ಪೊಲೀಸರಿಗೆ ಮಾಹಿತಿ ನೀಡದೆ ಮೆಕ್ಕಾ ಪ್ರವಾಸ ತೆರಳಿರುವುದು ಮುಸ್ಕಾನ್ ಕುಟುಂಬದ ಮೇಲೆ ಮತ್ತಷ್ಟು ಅನುಮಾನ ಮೂಡುವಂತಿದೆ.