Second PUC ಕಾಮರ್ಸ್ ನಂತರ ಮುಂದೇನು ಕಲಿಯುವುದು ಎಂಬುದರ ಪ್ರಶ್ನೆಗೆ ಉತ್ತರ ಇಲ್ಲಿದೆ!
ಸೆಕೆಂಡ್ ಪಿಯುಸಿ 2022 ಪರೀಕ್ಷೆಗಳು ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಇನ್ನು ಮುಂದಿರುವ ಪ್ರಶ್ನೆ ಏನೆಂದರೆ ದ್ವಿತೀಯ ಪಿಯುಸಿ ಆದ ನಂತರ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡುವುದು ಎಂದು. ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿರುವಂತ ವಿದ್ಯಾರ್ಥಿಗಳಿಗೆ ಈ ವಿಶೇಷ ಮಾಹಿತಿ ನೀಡಲಾಗಿದೆ.
ನೀವು ಪಿಯುಸಿಯಲ್ಲಿ ಕಾಮರ್ಸ್ ಓದಿದ್ದರೆ. ಹಲವು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿವ ಅವಕಾಶ ನಿಮಗಿದೆ.
ಬಹುತೇಕರು ಪಿಯುಸಿಯಲ್ಲಿ ಕಾಮರ್ಸ್ ಓದಿದ ಬಳಿಕ ಬಿ.ಕಾಂ, ಬಳಿಕ ಎಂ.ಕಾಂ/ಎಂಬಿಎ ಪದವಿಗಳಿಗೆ ಹೋಗುತ್ತಾರೆ. ಆದರೆ ಇವಲ್ಲದೆ ಕೆಲವು ಐಚ್ಛಿಕ ವಿಷಯಗಳೂ ಇದೆ. ಇವುಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಮುಖ್ಯ. ಅವು ಯಾವುದೆಂದರೆ, ಕಂಪ್ಯೂಟರ್ ಅಪ್ಲಿಕೇಷನ್, ಐಟಿ, ಇ ಕಾಮರ್ಸ್, ಆಫೀಸ್ ಮ್ಯಾನೇಜ್‌ಮೆಂಟ್, ಜಾಹೀರಾತು ವಿಷಯಗಳಲ್ಲಿಯೂ ಬಿ.ಕಾಂ ಪದವಿಗಳನ್ನು ಪಡೆಯಬಹುದು. ಮುಂದೆ ಎಂ.ಕಾಂ, ಎಂಬಿಎ, ಸಿಎ, ಸಿಎಸ್, ಸಿಎಫ್, ಲಾ, ಸಿಎಂಎ, ಸಿಎಫ್‌ಪಿ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಇವುಗಳ ಬಗ್ಗೆ ವಿವರವಾದ ವಿಷಯವನ್ನು ನಾವು ಇಲ್ಲಿ ತಿಳಿದುಕೊಳ್ಳೋಣ :
ಕಂಪನಿ ಸೆಕ್ರೆಟರಿ(ಸಿಎಸ್) ಗಾಗಿ ಫೌಂಡೇಷನ್ ಕೋರ್ಸ್ ಲಭ್ಯವಿದೆ. ಕೋರ್ಸ್‌ನ ಅವಧಿ 3 ವರ್ಷಗಳು. ಸಿಎಸ್‌ನಲ್ಲಿ ಫೌಂಡೇಷನ್ ಮಾತ್ರವಲ್ಲದೆ, ಎಕ್ಸಿಕ್ಯುಟಿವ್ ಮತ್ತು ಪ್ರೊಫೆಷನಲ್ ಪ್ರೋಗ್ರಾಮ್ ಸಹ ಲಭ್ಯವಿದೆ.
ಬ್ಯಾಚುಲರ್ ಆಫ್ ಅಕೌಂಟಿಂಗ್ ಆ್ಯಂಡ್ ಫೈನಾನ್ಸ್ ಕೋರ್ಸ್ ಕಲಿತರೆ ಕಾಸ್ಟ್ ಅಕೌಂಟಿಂಗ್, ಟ್ಯಾಕ್ಸ್, ಅಡಿಟಿಂಗ್, ಬಿಸ್ನಸ್ ಲಾ ಮತ್ತು ಎಕಾನಮಿಕ್ಸ್ ಇತ್ಯಾದಿ ವಿಷಯಗಳನ್ನು ಕಲಿಯಬಹುದಾಗಿದೆ. ಇನ್ನುಳಿದಂತೆ ಬ್ಯಾಚುಲರ್ಸ್ ಆಫ್ ಬ್ಯಾಂಕಿಂಗ್ ಆ್ಯಂಡ್ ಇನ್ಸೂರೆನ್ಸ್, ಸ್ಟೈಟಿಸ್ಟಿಕ್ಸ್ ಇತ್ಯಾದಿ ಕೋರ್ಸ್‌ಗಳನ್ನೂ ಮಾಡಬಹುದಾಗಿದೆ.
ಪಿಯುಸಿ ಕಾಮರ್ಸ್ ಬಳಿಕ ಚಾರ್ಟೆಡ್ ಅಕೌಂಟೆನ್ಸಿ ಕೋರ್ಸ್ ಕಲಿಯಬಹುದು. ಸಿಎ ಇದು ಜಗತ್ತಿನ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ವರ್ಷಕ್ಕೆ ಕೆಲವೇ ಕೆಲವು ವಿದ್ಯಾರ್ಥಿಗಳು ಸಿಎ ತೇರ್ಗಡೆಹೊಂದುತ್ತಾರೆ. ಈ ಕೋರ್ಸ್‌ನ ಅವಧಿ 5 ವರ್ಷಗಳು. ಚಾರ್ಟೆಡ್ ಅಕೌಂಟೆನ್ಸಿ ಕೋರ್ಸ್ ಸೇರಬೇಕಾದರೆ ಇದಕ್ಕಾಗಿ ಮೊದಲು ಕಾಮನ್ ಪ್ರೊಫಿಶಿಯೆನ್ಸಿ ಟೆಸ್ಟ್ (ಸಿಪಿಟಿ) ಬರೆಯಬೇಕು.
ಸಿಎ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಐಸಿಎಐ ಸದಸ್ಯರಾಗಬಹುದು. ಸಿಪಿಟಿ ಬಳಿಕ ಸಿಎ ಇಂಟರ್ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಬಳಿಕ ಇನ್‌ಫಾರ್ಮೆಷನ್ ಟೆಕ್ನಾಲಜಿ ಟ್ರೇನಿಂಗ್ ಕೋರ್ಸ್ ಬರೆಯಬೇಕು. ಬಳಿಕ ಸಿಎ ಅಂತಿಮ ಪರೀಕ್ಷೆ ಇರುತ್ತದೆ ಇದನ್ನು ಪಾಸ್ ಮಾಡಬೇಕು. ಸಿಎ ಮುಗಿದ ನಂತರ ಬ್ಯಾಂಕ್, ಕಂಪನಿಗಳು, ಹಣಕಾಸಂಸ್ಥೆಗಳು, ಉದ್ದಮಗಳಲ್ಲದೆ ಸ್ವಂತವಾಗಿ ಪ್ರ್ಯಾಕ್ಟಿಸ್ ಕೂಡಾ ಮಾಡಬಹುದು.
ಸಿಎಫ್‌ಪಿ ವೆಲ್ತ್ ಮ್ಯಾನೇಜ್‌ಮೆಂಟ್, ಇನ್ಸೂರೆನ್ಸ್ ಪ್ಲಾನಿಂಗ್, ಮ್ಯೂಚುಯಲ್ ಫಂಡ್ ಇನ್ವೆಸ್ಟಿಂಗ್, ಪರ್ಸನಲ್ ಫೈನಾನ್ಸ್ ಕುರಿತು ಆಸಕ್ತಿ ಉಳ್ಳವರು ಸರ್ಟಿಫೈಡ್ ಫೈನಾನ್ಶಿಯಲ್ ಸ್ಕ್ಯಾನರ್ ಎಂಬ ಕೋರ್ಸ್ ಮಾಡಬಹುದು. ಫೈನಾನ್ಶಿಯಲ್ ಫ್ಲ್ಯಾನಿಂಗ್ ಸ್ಟ್ಯಾಂಡರ್ಡ್ ಬೋರ್ಡ್ ಇಂಡಿಯಾ
(ಎಫ್‌ಪಿಎಸ್‌ಬಿ)ವು ಈ ಕೋರ್ಸ್ ನ್ನು ನಿಮಗೆ ಒದಗಿಸುತ್ತದೆ.
ವಾಣಿಜ್ಯ ವಿಷಯದಲ್ಲಿ ಪಿಯುಸಿ ಮುಗಿಸಿದ ಬಳಿಕ ಕಾನೂನು ಪದವಿಯನ್ನೂ ಪಡೆಯಬಹುದಾಗಿದೆ. ಬ್ಯಾಚುಲರ್ ಆಫ್ ಕಾಮರ್ಸ್ ಮತ್ತು ಬ್ಯಾಚುಲರ್ ಆಫ್ ಲೆಜಿಸ್ಟ್ರೇಟಿವ್ ಲಾ ಕೋರ್ಸ್ ಇವುಗಳು ಐದು ವರ್ಷಗಳ ಸಮಗ್ರ ಕಾನೂನು ಕೋರ್ಸ್‌ಗಳಾಗಿವೆ. ಪಿಯುಸಿ ಯಲ್ಲಿ ಶೇಕಡಾ 45 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ.
ಕಮರ್ಷಿಯಲ್ ಪ್ರಾಕ್ಟಿಸ್ ಕೋರ್ಸ್ ಎರಡು ವರ್ಷದ ಕೋರ್ಸ್ ಆಗಿದೆ. ಈ ಕೋರ್ಸ್ ಮುಗಿಸಿದವರಿಗೆ ಒಳ್ಳೆಯ ಉದ್ಯೋಗ ಸಿಗುತ್ತದೆ. ಈ ಕೋರ್ಸ್ ಮುಗಿಸಿದವರಿಗೆ ಸಚಿವರು ಹಾಗೂ ಅಧಿಕಾರಿಗಳ ಆಪ್ತ ಕಾರ್ಯದರ್ಶಿ ಅಥವಾ ಸಹಾಯಕರಾಗಬಹುದು.
ಕಾಸ್ಟ್ ಆ್ಯಂಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಕೋರ್ಸ್ ಅನ್ನು ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾವು ನೀಡುತ್ತದೆ. ಈಗ ಈ ಕೋರ್ಸ್‌ಗೆ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಕೋರ್ಸ್ ಎಂಬ ಹೆಸರು ನೀಡಲಾಗಿದೆ. ಸಿಎಂಎ ಕೋರ್ಸ್ ಸಹ ‘ಫೌಂಡೇಷನ್, ಇಂಟರ್‌ಮೀಡಿಯೇಟ್ ಮತ್ತು ಫೈನಲ್ ಎಂಬ ಮೂರು ಹಂತಗಳನ್ನು ಹೊಂದಿದೆ.
ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೂ
ಅರ್ಥಶಾಸ್ತ್ರ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರ
ಅಧ್ಯಯನ ಮಾಡಿ ಪಿಎಚ್‌ಡಿ ವರೆಗೂ ಅಧ್ಯಯನ
ಮಾಡಿದವರು ಅರ್ಥಶಾಸ್ತ್ರಜ್ಞರಾಗುತ್ತಾರೆ. ಇವರಿಗೆ ರಾಜ್ಯ
ಸರ್ಕಾರದ ಆರ್ಥಿಕ ಸಾಂಖ್ಯಿಕ ಇಲಾಖೆಗಳಲ್ಲಿ ಬ್ಯಾಂಕ್,
ದೊಡ್ಡ ದೊಡ್ಡ ಕೈಗಾರಿಕೆಗಳು, ಏಜನ್ಸಿಗಳಲ್ಲಿ
ಉದ್ಯೋಗಾವಕಾಶಗಳಿವೆ.
ಕಲಾ ವಿಷಯದಲ್ಲಿ ಪಿಯುಸಿ ಪಡೆದವರು ಬಿಬಿಎಗೆ ಸೇರಲು ಕೆಲವು ಕಾಲೇಜುಗಳು ಅವಕಾಶ ನೀಡುತ್ತವೆ.
ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ.
ಬಿಸಿನೆಸ್ ಮತ್ತು ಮ್ಯಾನೇಜ್‌ಮೆಂಟ್ ಆಸಕ್ತರಿಗೆ ಸೂಕ್ತವಾದ 3 ವರ್ಷದ ಕೋರ್ಸ್ ಇದಾಗಿದೆ. ಬಿಬಿಎ ನಂತರ ಎಂಕಾಂ ಅಥವಾ ಎಂಬಿಎ ಮಾಡಲು ನಿಮಗೆ ಅವಕಾಶ ಇದೆ.