ಮುಂಜಾನೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ಅದೃಷ್ಟವಂತರು ನೀವು! ಇದು ಮುಂಬರುವ ಅದೃಷ್ಟದ ಸೂಚನೆ..

ಮನುಷ್ಯ ಸಾಮಾನ್ಯವಾಗಿ ಚೆನ್ನಾಗಿ ಬದುಕಲು ಆಸೆ ಪಡುತ್ತಾನೆ. ನಮಗಿಂತ ಚೆನ್ನಾಗಿ ಇರುವವರನ್ನು ಕಂಡಾಗ ನಮಗೆ ಯಾವಾಗಲೂ ಅನಿಸುತ್ತದೆ ಯಾಕೆ ನಾವು ಅವರ ಥರಹ ಆಗೋಕೆ ಸಾಧ್ಯವಿಲ್ಲ ಅಂತ. ನಮಗೆ ಯಾವಾಗ ಅಂಥ ಅದೃಷ್ಟ ಒಲಿದು ಬರುತ್ತದೆ ಎಂಬ ಕನಸು‌ ಕಾಣುತ್ತಲೇ ದಿನ ಕಳೆಯುತ್ತೇವೆ.

 

ಆದರೆ ಇದನ್ನು ತಿಳಿದುಕೊಳ್ಳುವುದು ತುಂಬಾ ಸರಳ. ಅದೃಷ್ಟವನ್ನು ಸೂಚಿಸುವ ವಸ್ತುಗಳಾವುವು..? ಮುಂಜಾನೆ ಏನನ್ನು ನೋಡಿದರೆ ಅದೃಷ್ಟ… ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಇಲ್ಲಿದೆ ಸರಳ ಸೂಚನೆ.

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಳ್ಳೆಯ ದಿನಗಳು ಬರುವ ಮೊದಲು ಸಾಮಾನ್ಯವಾಗಿ ಕೆಲವು ಶುಭ ಘಟನೆಗಳು ಪ್ರಾರಂಭವಾಗುತ್ತವೆ. ಆ ಕಾರಣದಿಂದಾಗಿ ವ್ಯಕ್ತಿಯು ತನ್ನ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸಲಿದೆ ಮತ್ತು ಅವನ ದಿನಗಳು ಸುಧಾರಿಸಲಿವೆ ಎಂಬ ಮುನ್ಸೂಚನೆಯನ್ನು ಪಡೆದುಕೊಳ್ಳುತ್ತಾನೆ. ಮತ್ತೊಂದೆಡೆ, ನೀವು ಹಗಲಿನಲ್ಲಿ ಅಥವಾ ಮುಂಜಾನೆ ಅಥವಾ ಇದ್ದಕ್ಕಿದ್ದಂತೆ ಇಂತಹ ಕೆಲವು ಬದಲಾವಣೆಗಳನ್ನು ನೋಡಿದರೆ, ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತಿದೆ ಎಂದರ್ಥ. ಅಂತಹ ಶುಭ ಸೂಚನೆಗಳಾವುವು..?

ಹೊಸದಾಗಿ ಮದುವೆಯಾದ ವರ ಮತ್ತು ವಧು : ದಾರಿಯಲ್ಲಿ ಶೃಂಗಾರ ಮಾಡಿಕೊಂಡ ಹೊಸ ವಧುವನ್ನು ನೀವು ನೋಡಿದರೆ, ಅದನ್ನು ಜೀವನದ ಉತ್ತಮ ಮತ್ತು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಶ್ರೀಫಲ : ಮುಂಜಾನೆ ಎದ್ದಾಕ್ಷಣ ಯಾರಾದರೂ ಶ್ರೀಫಲವನ್ನು ನೋಡಿದರೆ ಅದು ಆ ವ್ಯಕ್ತಿಗೆ ಶುಭವನ್ನು ತರುವುದು. ನೀವು ಮುಂಜಾನೆ ಶ್ರೀಫಲವನ್ನು ನೋಡಿದಾಕ್ಷಣ ಶುಭ ಸುದ್ದಿಗಳನ್ನು ಪಡೆಯಲಿದ್ದೀರಿ ಎಂಬ ಸೂಚನೆ.

ಪಕ್ಷಿ : ಅದೃಷ್ಟವಂತರನ್ನು ಮಾತ್ರ ಪಕ್ಷಿಗಳು ಮುಟ್ಟುತ್ತದೆ ಎನ್ನುವ ನಂಬಿಕೆಯಿದೆ. ಓರ್ವ ವ್ಯಕ್ತಿಯನ್ನು ಪಕ್ಷಿಯೊಂದು ಮುಟ್ಟಿದರೆ ಅದು ಆತನಿಗೆ ಅದೃಷ್ಟವನ್ನು ತರುತ್ತದೆ.

ಪಕ್ಷಿ ಧ್ವನಿ : ಕೋಗಿಲೆ ಅಥವಾ ಮಗ ಹಕ್ಕಿ ಮನೆಯ ಛಾಚಣಿ ಮೇಲೆ ಅಥವಾ ಆರೋಹಣದ ಮೇಲೆ ಕುಳಿತು ಸುಂದರವಾದ ಧ್ವನಿಯಿಂದ ಕೂಗಿದರೆ ಅದು ನಿಮಗೆ ಬರುವ ಆರ್ಥಿಕ ಲಾಭವನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಆರ್ಥಿಕ ಲಾಭವನ್ನು ಇದು ಸೂಚಿಸುತ್ತದೆ.

ಮೊಸರು, ಹಾಲು: ನೀವು ಬೆಳಗ್ಗೆ ಎದ್ದ ಕೂಡಲೇ ಮೊಸರು ಅಥವಾ ಹಾಲನ್ನು ಮೊದಲ ಬಾರಿ ನೋಡಿದರೆ ಅದು ನಿಮ್ಮ ಅದೃಷ್ಟದ ಸಂಕೇತ. ಆದ್ದರಿಂದ ಮುಂಜಾನೆ ಯಾವಾಗಲೂ ಶುದ್ಧತೆಯನ್ನು ಸೂಚಿಸುವ ಬಿಳಿ ವಸ್ತುಗಳನ್ನು ನೋಡಿದರೆ ಅದೃಷ್ಟ ಹತ್ತಿರನೇ ಇದೆ ಎಂದರ್ಥ.

ಮುತ್ತು: ಸಮುದ್ರದ ತೀರದಲ್ಲಿ ಮುತ್ತುಗಳು ಸಿಗುವುದು ಅಪರೂಪ. ಈ ಅಪರೂಪದ ವಸ್ತು ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ. ಮುತ್ತು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಮುಂಜಾನೆ ಎದ್ದಾಕ್ಷಣ ಮುತ್ತನ್ನು ನೋಡಿದರೆ ನಿಮಗೆ ಅದೃಷ್ಟ ಒಲಿಯುವುದು.

ಮಿಡತೆ : ಮುಂಜಾನೆ ಎದ್ದಾಕ್ಷಣ ಮಿಡತೆಯು ಕೂಗುವುದನ್ನು ಕೇಳುವುದು ಅಥವಾ ನೋಡುವುದು ಕೆಟ್ಟ ದಿನಗಳ ಅಂತ್ಯದ ಮುನ್ಸೂಚನೆ‌. ಹಾಗಾಗಿ ನಿಮ್ಮ ಮುಂದಿನ ದಿನಗಳು ಶುಭ ದಿನವಾಗಿರುತ್ತದೆ.

ತುರಿಕೆ : ಕೈಯಲ್ಲಿ ತುರಿಕೆ ಇದ್ದರೆ ಅದು ಹಣ ಶೀಘ್ರದಲ್ಲೇ ಬರಲಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಈ ಶುಭ ಚಿಹ್ನೆಗಳಲ್ಲಿ ಯಾವುದಾದರೂ ಸಂಭವಿಸಿದಲ್ಲಿ, ನೀವು ಶುಭ ಮತ್ತು ಅನುಕೂಲಕರ ಜೀವನವನ್ನು ಪ್ರವೇಶಿಸುತ್ತಿದ್ದೀರಿ ಮತ್ತು ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ಎಂಬುದನ್ನು ಅರ್ಥೈಸಿಕೊಳ್ಳಿ.

Leave A Reply

Your email address will not be published.