ಮೊಗೇರ ಸಮುದಾಯಕ್ಕೆ ಅನ್ಯಾಯವಾದರೂ ಚಡ್ಡಿಗಳ ಚಡ್ಡಿ ತೊಳೆಯುತ್ತಿದ್ರ ಸಚಿವರೇ!! ಮೈಕ್ ಸಿಕ್ಕ ಖುಷಿಯಲ್ಲಿ ಸಚಿವ ಅಂಗಾರರನ್ನು ಟೀಕಿಸಿ ನಾಲಗೆಗೆ ಹೊಲಸು ಮೆತ್ತಿಕೊಂಡ ಮಿತ್ತಬೈಲ್
ರಾಜಕೀಯದಲ್ಲಿ ಕೆಸರೆರಚಾಟ ಮಾಮೂಲಿ. ಆದರೆ ಇಂದು ಸಚಿವ ಅಂಗಾರರನ್ನು ಟೀಕಿಸುವ ಭರದಲ್ಲಿ ಮಿತ್ತಬೈಲ್ ಕೀಳು ಮಟ್ಟದ ಪದ ಪ್ರಯೋಗಿಸಿ ಭಾಷಣ ಮಾಡಿ ಸಂಘಟಕರಿಗೆ ಮುಜುಗರ ಉಂಟು ಮಾಡಿದ್ದರಲ್ಲದೆ, ರಾಜಕೀಯ ಏಕಪಕ್ಷೀಯ ಭಾಷಣದಿಂದ ಬೇಸತ್ತ ಸಮಾನ ಮನಸ್ಕರು ಸಭೆಯಿಂದ ಹೊರನಡೆದ ಪ್ರಸಂಗ ಕಡಬದಲ್ಲಿ ನಡೆದಿದೆ.
ವಿವಿಧ ದಲಿತ ಸಂಘಟನೆಗಳ ವತಿಯಿಂದ ಇಂದು ಕಡಬದಲ್ಲಿ ನಡೆದ ನಕಲಿ ಜಾತಿ ಪ್ರಮಾಣಪತ್ರ ತಡೆಗೆ ‘ಪರಿಶಿಷ್ಟರ ನಡೆ ತಹಶೀಲ್ದಾರ್ ಕಚೇರಿ ಕಡೆಗೆ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಿತ್ತಬೈಲ್, ಮೈಕ್ ಸಿಕ್ಕ ಖುಷಿಯಲ್ಲಿ ಮಾತನಾಡುತ್ತಾ, ಮೊಗೇರ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಅಂಗಾರರು ಚಡ್ಡಿಗಳ ಚಡ್ಡಿ ತೊಳೆಯುತ್ತಿದ್ರಾ ,ಅಸೆಂಬ್ಲಿಯಲ್ಲಿ ಕತ್ತೆ ಮೇಯಿಸ್ತಾ ಇದ್ರಾ ಎನ್ನುತ್ತಾ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ಭಾಷಣದ ಮೂಲಕ ಕಿಡಿಕಾರಿದ್ದಾರೆ. ಸದ್ಯ ಈ ಬಗೆಗಿನ ವೀಡಿಯೋ /ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ರಾಜಕೀಯ ರಹಿತ ಶಿಸ್ತುಬದ್ದ ಜಾಗೃತಿ ವಹಿಸಬೇಕೆಂದು ವಿವಿಧ ಕಡೆ ಸಭೆ ನಡೆಸಿ ಸಿದ್ಧರಾಗಿದ್ದ ಸಂಘಟಕರಿಗೆ ಈ ಘಟನೆಯಿಂದಾಗಿ ಮುಜುಗರ ಉಂಟಾಗಿದೆ. ಈ ಹೋರಾಟದ ಬಗೆಗೆ ಯಾವುದೇ ಸಭೆಯಲ್ಲೂ ಕಾಣಿಸಿಕೊಳ್ಳದ ಮಿತ್ತಬೈಲ್ ಗೆ ಹಕ್ಕೊತ್ತಾಯ ಸಭೆಯಲ್ಲಿ ಮೈಕ್ ಹಿಡಿಯಲು ಅವಕಾಶ ಕೊಟ್ಟವರಾರು ಎಂಬ ಪ್ರಶ್ನೆ ಇದೀಗ ನೆರೆದಿದ್ದವರನ್ನು ಕಾಡಿದೆ. ಮಿತ್ತ ಬೈಲ್ ಗೆ ಹಿತ ಮಿತವಾಗಿ ಮಾತಾಡಲು ಬಾರದು. ಕೈಗೆ ಮುಷ್ಟಿ ಗಾತ್ರದ ಮೈಕು ಸಿಕ್ಕರೆ ಸಾಕು, ಪಾನ್ ಪರಾಗ್ ಜತೆ ಮಾತಿನ ಹೊಲಸು ಬಾಯಿ ತುಂಬಾ ತುಂಬಿಕೊಂಡು ಉಗುಳುವುದು ಆತನ ಪ್ರತಿ ಬಾರಿಯ ಖಯಾಲಿ. ಇದು ಈ ಸಲ ಕೂಡಾ ಜಾಹೀರಾತು ಥರ ಪ್ರಕಟ ಗೊಂಡಿದೆ. ಹಿಂದುಳಿದ ವರ್ಗಕ್ಕೆ ಸೇರಿದ, ಸಜ್ಜನ ರಾಜಕಾರಣಿ ಅಂಗಾರ ಅವರಿಗೆ ವಿನಾ ಕಾರಣ ಮಾತಿನ ಉಗುಳು ಚೆಲ್ಲಿದ ಮಿತ್ತಬೈಲು ಗೆ ಪ್ರಾಯ ಆಗುತ್ತಿದೆ. ಆದರೆ ಆತ ಹಿರಿಯನಾಗುತ್ತಿಲ್ಲ ಅನ್ನುವುದು ಆತನ ಬಲ್ಲವರ ಕೊರಗು.