230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !!

ಸಾವಿರಾರು ವರ್ಷಗಳು, ಅಲ್ಲಲ್ಲ ಸುಮಾರು 230 ಮಿಲಿಯನ್ ವರ್ಷಗಳ ಹಿಂದೆ ಇವು ಭೂಮಿಯಲ್ಲಿ ಓಡಾಡುತ್ತಿದ್ದ ಭಯಂಕರ ಜೀವಿಗಳು. ಇಡೀ ಪ್ರಪಂಚವೇ ಒಂದೊಮ್ಮೆ ಇವುಗಳ ಇರುವಿಕೆಯ ವಿಚಾರವೇ ಕೇವಲ ಇಮ್ಯಾಜಿನೇಶನ್ ಅಂತ ಭಾವಿಸಿತ್ತು. ಆದರೆ ಈಗ ವಿಜ್ಞಾನವು ಈ ಜೀವಿಗಳು ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದುದು ನಿಜವೆಂದು ಸಾಬೀತಾಗಿದೆ. ಇದಾದ ಸಾವಿರಾರು ವರ್ಷಗಳ ಬಳಿಕ ಮತ್ತೊಮ್ಮೆ ಈ ಭಯಾನಕ ಜೀವಿಗಳಾದ ಡೈನೋಸಾರ್‌ಗಳು ಮೊನ್ನೆ ಮತ್ತೊಮ್ಮೆ ಪ್ರತ್ಯಕ್ಷವಾಗಿವೆ. ಅರೆ ಏನಿದು ವಿಚಿತ್ರ ಎಂದು ಅಚ್ಚರಿ ಆಯಿತೇ??

 

ಈ ಡೈನೋಸಾರಸ್ ಗಳು ಮತ್ತೆ ಕಂಡ ಸುದ್ದಿ ಇದೀಗ ಬಿಸಿಬಿಸಿ ಚರ್ಚೆಯಲ್ಲಿದೆ. ಬೀಚ್‍ನಲ್ಲಿ ಬೇಬಿ ಡೈನೋಸಾರ್‌ಗಳ ಗುಂಪು ಓಡಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಡೈನೋಸಾರ್ ಮರಿಗಳು ಸಮುದ್ರದ ಬೀಚ್‍ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆಯನ್ನು ನೀಡಿ ಈ ವೀಡಿಯೋ ಅನ್ನು ಒಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ 14 ಸೆಕೆಂಡ್ ಇದ್ದು, ನೋಡಗರನ್ನು ಗೊಂದಲಕ್ಕೀಡು ಮಾಡುತ್ತದೆ. ಈಗಾಗಲೇ ಈ ವೀಡಿಯೋವನ್ನು 9.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಉದ್ದನೆಯ ಕುತ್ತಿಗೆಯ ಡೈನೋಸಾರ್ ಜಾತಿಯ ಪ್ರಾಣಿಗಳ ಗುಂಪೊಂದು ಸಮುದ್ರದ ಕಡೆಗೆ ಓಡುತ್ತಿವೆ.

ಇದನ್ನು ಒಮ್ಮೆಲೆ ನೋಡಿದಾಗ ಡೈನೋಸಾರ್ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಡೈನೋಸಾರ್ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಅಂದ ಹಾಗೆ ಈ ವೀಡಿಯೋದಲ್ಲಿರುವ ಪ್ರಾಣಿ ಡೈನೋಸಾರ್ ಅಲ್ಲ, ಬದಲಿಗೆ ಕೋಟಿಸ್ ಎನ್ನುವ ಪ್ರಾಣಿ. ಇದರ ಬಾಲ ಉದ್ದವಿರುವುದರಿಂದ ಇದು ನೋಡಲು ಡೈನೋಸಾರ್ ಹಾಗೆ ಕಾಣುತ್ತಿದೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಕೋಟಿಸ್ ಓಡುತ್ತಿರುವುದನ್ನು ಉಲ್ಟಾ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ.

ಕೋಟಿಸ್ ಪ್ರಾಣಿಯು ಅಮೆರಿಕ, ಮೆಕ್ಸಿಕೊ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು 33 ರಿಂದ 68 ಇಂಚು ಎತ್ತರವಿದ್ದು, 2ರಿಂದ 8 ಕ.ಜಿಯವರೆಗೆ ತೂಕವಿರಲಿದೆ ಎಂದು ತಿಳಿದುಬಂದಿದೆ. ರಿವರ್ಸ್ ಕ್ಯಾಮರ ಟೆಕ್ನಾಲಜಿ ಯಿಂದ ಇದೆಲ್ಲ ಸಾಧ್ಯ ಆಗಿದೆ.

https://twitter.com/buitengebieden/status/1521943849656016897?s=20&t=f9166OuYEToNcLEGBL3SZw
ವೈರಲ್ ವೀಡಿಯೋ

Leave A Reply

Your email address will not be published.