Army ಯಲ್ಲಿ ಉದ್ಯೋಗ : ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್ ಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಜೂ.9 ಕೊನೆಯ ದಿನಾಂಕ

ಭಾರತೀಯ ಮಿಲಿಟರಿಯು ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. 136ನೇ ಬ್ಯಾಚ್ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅವಿವಾಹಿತ ಇಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಮೂಲಕ ಮೇ 11 ರಿಂದ ಅರ್ಜಿ ಹಾಕಬಹುದು.

 

ಉದ್ಯೋಗ : ಭಾರತೀಯ ಮಿಲಿಟರಿ
ಹುದ್ದೆ ಹೆಸರು : ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್, 136ನೇ ಬ್ಯಾಚ್

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 11-05-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09-06-2022

ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಾಸ್ ಮಾಡಿರಬೇಕು.

ಆನ್‌ಲೈನ್ ಹೊರತು ಪಡಿಸಿ ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಯಾವೆಲ್ಲಾ ವಿಭಾಗಗಳಲ್ಲಿ ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್‌ಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಹುದ್ದೆಗಳು : ಆರ್ಕಿಟೆಕ್ಚರ್, ಮೆಕ್ಯಾನಿಕಲ್, ಸಿವಿಲ್
ಇಲೆಕ್ಟ್ರಿಸಿಟಿ / ಇಲೆಕ್ಟಿಕಲ್ / ಇಲೆಕ್ಟ್ರಾನಿಕ್ಸ್,
ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಟೆಕ್ನಾಲಜಿ,
ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಟೆಲಿಕಮ್ಯೂನಿಕೇಷನ್ / ಉಪಗ್ರಹ ತಂತ್ರಜ್ಞಾನ ಮತ್ತು ಇತರೆ
ಏರೋನಾಟಿಕಲ್ / ಏವಿಯೋನಿಕ್ಸ್
ಏರೋಸ್ಪೇಸ್, ನ್ಯೂಕ್ಲಿಯಾರ್ ಟೆಕ್ನಾಲಜಿ
ಆಟೋಮೊಬೈಲ್, ಲೇಸರ್ ಟೆಕ್ನಾಲಜಿ
ಇಂಡಸ್ಟ್ರಿಯಲ್ / ಮ್ಯಾನುಫ್ಯಾಕ್ಟರಿಂಗ್

ವಯೋಮಿತಿ :  ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್,
ಇಂಜಿನಿಯರಿಂಗ್ ಪದವಿ ಪಾಸ್ ಪ್ರಮಾಣ ಪತ್ರ,
ಸ್ಕ್ಯಾನ್ ಮಾಡಿದ ಭಾವಚಿತ್ರ,  ಸಹಿ ಸ್ಕ್ಯಾನ್ ಕಾಪಿ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ನಂತರ ಓಪನ್ ಆದ ಪೇಜ್‌ನಲ್ಲಿ ‘Officer Entry Apply Login’ ಎಂಬಲ್ಲಿ ಕ್ಲಿಕ್ ಮಾಡಿ. ಅನಂತರ ‘ರಿಜಿಸ್ಟ್ರೇಶನ್’ ಎಂಬಲ್ಲಿ ಕ್ಲಿಕ್ ಮಾಡಿ, ಸೂಚನೆಗಳನ್ನು ಓದಿಕೊಂಡು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಅಪ್ಲಿಕೇಶನ್ ಪೂರ್ಣಗೊಳಿಸಿ.

ಅರ್ಜಿಯ ಲಿಂಕ್ ಮೇ 11 ರಂದು ವೆಬ್‌ಸೈಟ್ www.joinindianarmy.nic.in ನಲ್ಲಿ ಲಭ್ಯವಾಗಲಿದೆ.

Leave A Reply

Your email address will not be published.