ಚಿತ್ರನಟ ಮೋಹನ್ ಜುನೆಜ ವಿಧಿವಶ

ಬೆಂಗಳೂರು : ಚಿತ್ರನಟ ಮೋಹನ್ ಜುನೇಜಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ.

 

ಬಾಯಿ ತುಂಬಾ ಏನಾದರೂ ಜಗಿಯುತ್ತಾ, ಪೊಲೀಸ್ ಪಾತ್ರದಲ್ಲೂ ನಗುವಿನ ಚಿಲುಮೆ ಮೂಡಿಸಿದ, ಕಾಮಿಡಿ ಪಾತ್ರಗಳಲ್ಲಿ ಕೂಡಾ ತನ್ನ ಒರಟುತನ ತೋರಿಸದೇ ನಗೆಗಡಲಲ್ಲಿ ತೇಲಿಸಿದ ನಟ ಇಂದು ನಮ್ಮೊಂದಿಗಿಲ್ಲ. ಪಾತ್ರ ಎಷ್ಟೇ ಸಣ್ಣದಾಗಿದ್ದರೂ ಜನರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಕೆಜಿಎಫ್ 2 ಸಿನಿಮಾದಲ್ಲಿ ಆನಂದ್ ಇಂಗಳಗಿಗೆ ರಾಕಿ ಭಾಯ್ ಬಗ್ಗೆ ಮಾಹಿತಿ ಕೊಡುವ ವ್ಯಕ್ತಿಯಾಗಿ ನಟಿಸಿದ್ದ ಮೋಹನ್ ಜುನೇಜ ಅವರು, ‘ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್. ಅವನು ಒಬ್ಬನೇ ಬರೋನು.. ಮಾನ್‌ಸ್ಟರ್’ ಎಂದು ಅವರು ಹೇಳಿದ ಡೈಲಾಗ್ ಸಖತ್ ಫೇಮಸ್ ಆಗಿತ್ತು.

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ. ಮೋಹನ್ ಜುನೇಜಾ ಅವರು ಕಿರುತೆರೆಯ ವಠಾರ' ಸೀರಿಯಲ್ ನಿಂದ ಜನಪ್ರಿಯರಾದರು.ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದಾರೆ.ಚೆಲ್ಲಾಟ’ ಚಿತ್ರದ ಮಧುಮಗನ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟಿತು.

ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 7) ವಿಧಿವಶರಾಗಿದ್ದಾರೆ.

ಮೋಹನ್‌ ಜುನೇಜಾ ಅವರ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ರಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾಗಿದ್ದು ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಹೆಣ್ಣು ಮಕ್ಕಳಿಗೆ ತಾಳಿ ಮಹತ್ವ ಸಾರಿದ್ದರು.

ಚೆಲ್ಲಾಟ ಸಿನಿಮಾದಲ್ಲಿ ಮೋಹನ್ ಮಧುಮಗ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ರಸಿಕರ ಗಮನ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಟ್ಟಿತ್ತು. ಪ್ರತಿಯೊಂದು ಸಿನಿಮಾದಲ್ಲಿ ಮೋಹನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಪಾತ್ರವೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿತ್ತು.

ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಹಾಸ್ಯ ನಟನಾಗಿ ತೆರೆ ಮೇಲಿನ ಜರ್ನಿ ಆರಂಭಿಸಿದ್ದರು. ಮೋಹನ್ ಅವರ ಮೊದಲ ಸಿನಿಮಾ ‘ವಾಲ್ ಪೋಸ್ಟರ್’ ಮತ್ತು ಅವರ ಮೊದಲ ಧಾರಾವಾಹಿ ‘ವಠಾರ’ . ಅವರ ಮೊದಲ ವಾಲ್ ಪೇಪರ್ ಸಿನಿಮಾ ಮೂರ್ನಾಲ್ಕು ಪ್ರಶಸ್ತಿ ಪಡೆದುಕೊಂಡಿದೆ. ಸುಮಾರು 500 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್
ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ ಸಿನಿಮಾ ಮತ್ತು ರಿಯಲ್ ಸ್ಟಾರ್ ಉಪೇಂದ್ರರ ಕಬ್ಜ ಸಿನಿಮಾದಲ್ಲೂ ಅಭಿನಯಿಸಿದ್ದರು.

ಮೋಹನ್ ಅವರು ಪತ್ನಿ ಕುಸುಮಾ ಮತ್ತು ಇಬ್ಬರು ಮಕ್ಕಳಾದ ಅಕ್ಷಯ್ (22 ವರ್ಷ) ಮತ್ತು ಅಶ್ವಿನ್ (26 ವರ್ಷ) ಅವರನ್ನು ಅಗಲಿದ್ದಾರೆ. ಮೋಹನ್ ಕಿರಿಯ ಪುತ್ರ ಅಕ್ಷಯ್ ಅವರಿಗೆ ಛಾಯಾಗ್ರಹಣದಲ್ಲಿ ಆಸಕ್ತಿ ಹೆಚ್ಚಿದೆ. ಹಿರಿಯ ಪುತ್ರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ, ವಿಫಲರಾದ ಕಾರಣ ಖಾಸಗಿ ವೃತ್ತಿಯಲ್ಲಿ ತೊಗಿಸಿಕೊಂಡಿದ್ದಾರೆ.

Leave A Reply

Your email address will not be published.