ವಿಟ್ಲ : ಎಸ್ ಎಸ್ ಎಲ್ ಸಿ ಬಾಲಕಿ ಆತ್ಮಹತ್ಯೆ ಪ್ರಕರಣ| ಅನ್ಯಕೋಮಿನ ಆರೋಪಿ ಅರೆಸ್ಟ್ !

ವಿಟ್ಲ: ಎಸ್ ಎಸ್ ಎಲ್ ಸಿ ಬಾಲಕಿ ಆತ್ಮೀಕಾ (14) ಆತ್ಮಹತ್ಯೆಗೆ ಕಾರಣನಾದ ಲವ್ ಜಿಹಾದ್ ಪ್ರಕರಣದ ಆರೋಪಿ ಸಾಹುಲ್ ಹಮೀದ್ ನ ಬಂಧನವಾಗಿದೆ.
ವಿಟ್ಲ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು.

 

ಘಟನೆ ವಿವರ : ವಿಟ್ಲದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿತ್ತು. ಮೂಲತಃ ಪಂಜ ನಿವಾಸಿ ಸಂಜೀವ ಅವರ ಪುತ್ರಿ ಆತ್ಮೀಕಾ(14) ನೇಣಿಗೆ ಕೊರಳು ಒಡ್ಡಿದ ವಿದ್ಯಾರ್ಥಿನಿ.
ಸಾಹುಲ್ ಹಮೀದ್ ಎಂಬಾತ ವಿದ್ಯಾರ್ಥಿನಿಯ ಜೊತೆಗೆ ಪ್ರೇಮ ಮಾಡುವಂತೆ ಒತ್ತಾಯಿಸಿದ್ದಾನೆ. ನಂತರ ಮಾನಸಿಕ ಹಿಂಸೆ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂಬುದೂ ಪ್ರಾಥಮಿಕ ಮೂಲಗಳಿಂದ ತಿಳಿದಿತ್ತು.

ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಎಂಬವರು  ಅನ್ಯಕೋಮಿನ ವ್ಯಕ್ತಿಯೊಬ್ಬರ ಮನೆಗೆ ಬಾಡಿಗೆಗೆ ಹೋಗಿದ್ದರು. ಅಲ್ಲಿ ವಾಸ ಇರುವಾಗ, ಅವರ ಅಪ್ರಾಪ್ತ ವಯಸ್ಸಿನ ಮಗಳು ಆತ್ಮಿಕಾಳ ಸಂಪರ್ಕ ಸಾಧಿಸಿದ ಸಾಹುಲ್ ಹಮೀದ್ ಎಂಬಾತ ಆಕೆಯನ್ನು ಪ್ರೀತಿಸುವಂತೆ ಪೀಡಿಸಿದ್ದ. ಆತನ ಒತ್ತಡಕ್ಕೆ ಸಿಲುಕಿ, ಆತನ ಕಿರುಕುಳ ತಾಳ ಲಾರದೆ ಹುಡುಗಿ ದುಡುಕಿನ ನಿರ್ಧಾರ ಕೈಗೊಂಡಿದ್ದು,ಆತ್ಮಹತ್ಯೆ ಮಾಡಿದ್ದಳು.

Leave A Reply

Your email address will not be published.