ಶಿರಡಿ ಸಾಯಿಬಾಬಾ ದೇವಸ್ಥಾನದ ಧ್ವನಿ ವರ್ಧಕದ ಬಗ್ಗೆ ಹೀಗೆ ಮನವಿ ಮಾಡಿದ ಎಂಎನ್‌ಎಸ್‌!

ರಾಜ್ಯದಲ್ಲಿ ಮಸೀದಿಗಳ ಧ್ವನಿವರ್ಧಕ ತೆರವುಗೊಳಿಸುವ ಚರ್ಚೆಯ ನಡುವೆ ಎಂಎನ್‌ಎಸ್‌ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್​ ಮಾಡಬಾರದು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.

 

ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಶಿರಡಿ ಶ್ರೀಸಾಯಿಬಾಬಾ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ರಾತ್ರಿ ಮತ್ತು ಬೆಳಗಿನ ಆರತಿ ನಡೆದಿದೆ.  ರಾತ್ರಿ ಮತ್ತು ಮುಂಜಾನೆ ದೇವಸ್ಥಾನದಲ್ಲಿ ಧ್ವನಿವರ್ಧಕಗಳಿಲ್ಲದೇ ಆರತಿ, ಪೂಜೆ ನಡೆಯುತ್ತಿದೆ. ಈ ವಿಚಾರ ಮುಸ್ಲಿಂ ಸಮುದಾಯದವರು ಗಮನಕ್ಕೆ ಬಂದಿದ್ದು, ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ದೇವಸ್ಥಾನದವರು ನ್ಯಾಯಾಲಯದ ಆದೇಶದ ಮೇರೆಗೆ ದೇವಸ್ಥಾನದಲ್ಲಿ ಧ್ವನಿವರ್ಧಕಗಳು ಬಳಸದೇ ಆರತಿ ಮತ್ತು ಪೂಜಾ ವಿಧಿವಿಧಾನಗಳು ನಿತ್ಯವೂ ಸುಸೂತ್ರವಾಗಿ ನಡೆಯುತ್ತಿದೆ ಎಂದರು.

ದಯವಿಟ್ಟು ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನು ಬಂದ್​ ಮಾಡ್ಬೇಡಿ ಎಂದು ಮುಸ್ಲಿಂ ಸಮುದಾಯದಿಂದ ಆಗ್ರಹಿಸಿ ಪೊಲೀಸ್​ ಇಲಾಖೆಗೆ ಮನವಿ ಮಾಡಿದ್ದಾರೆ.

ಶಿರಡಿ ಸಾಯಿಬಾಬಾ ಅವರ ದ್ವಾರಕಾಮಾಯಿ ಮಸೀದಿಯಲ್ಲಿ ಹಿಂದೂ – ಮುಸ್ಲಿಂ ಐಕ್ಯತೆ ಸಂಕೇತಿಸುವ ಹಸಿರು ಮತ್ತು ಕೇಸರಿ ಧ್ವಜಗಳನ್ನು ಒಟ್ಟಿಗೆ ಹಾರಿಸಲಾಗಿದೆ. ಈ ಮತಾಂಧತೆಯಿಂದ ಇಲ್ಲಿನ ಹಿಂದೂ – ಮುಸ್ಲಿಂ ಐಕ್ಯತೆಗೆ ಧಕ್ಕೆಯಾಗುವುದು ಸರಿಯಲ್ಲ.  ಹಲವು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಾಯಿಬಾಬಾ ದೇವಸ್ಥಾನದಲ್ಲಿ ಈ ರೀತಿ ನಡೆದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸಾಯಿಬಾಬಾ ದೇವಸ್ಥಾನವು ವಿಶ್ವ ಕೀರ್ತಿ ಮತ್ತು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ ಹಾಗಾಗಿ ದೇವಸ್ಥಾನದಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡದಂತೆ ಜಾಮಾ ಮಸೀದಿ ಟ್ರಸ್ಟ್ ಹಾಗೂ ಮುಸ್ಲಿಂ ಸಮುದಾಯದವರು ಒತ್ತಾಯಿಸಿದ್ದಾರೆ.

Leave A Reply

Your email address will not be published.