ಮಂಗಳೂರು : ರೌಡಿ ಶೀಟರ್ ರಾಹುಲ್ ಹತ್ಯೆ ಪ್ರಕರಣ – ಮದುವೆ ಸಮಾರಂಭದಲ್ಲಿ ನಡೆದ ಹಲ್ಲೆಗೆ ಪ್ರತೀಕಾರ!

ಮಂಗಳೂರು : ಇತ್ತೀಚೆಗೆ ರೌಡಿ ಶೀಟರ್ ಹೊಯ್ಗೆ ಬಜಾರ್ ನಿವಾಸಿ ರಾಹುಲ್ ಯಾನೆ ಕಕ್ಕೆ (26) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

 

ಪಾಂಡೇಶ್ವರ ಬಳಿಯ ಎಮ್ಮೆಕೆರೆ ಮೈದಾನದ ಬಳಿ ಗುರುವಾರ ಸಂಜೆ ಎಮ್ಮೆಕೆರೆ ಬಳಿ ಕೋಳಿ ಅಂಕಕ್ಕೆ ಬಂದಿದ್ದ ರಾಹುಲ್ ವಾಪಾಸು ಹೋಗುತ್ತಿರುವಾಗ ದುಷ್ಕರ್ಮಿಗಳು ಅಟ್ಟಿಸಿಕೊಂಡು ಬಂದು ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್, ಸುಶಿತ್ ಹಾಗೂ ಇನ್ನೋರ್ವನ ಸಹಿತ ನಾಲ್ವರ ತಂಡ ಮೈದಾನದ ಬಳಿ ತಲವಾರುಗಳಿಂದ ಯದ್ವಾತದ್ವಾ ದಾಳಿಗೈದು ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಇದು ಕಳೆದ ವರ್ಷ ಮದುವೆ ಸಮಾರಂಭದಲ್ಲಿ ನಡೆದ ಹಲ್ಲೆಗೆ ಪ್ರತೀಕಾರ ಎನ್ನಲಾಗಿದ್ದು, ರಾಹುಲ್‌ನನ್ನು ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಎಮ್ಮೆಕೆರೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ರಾಹುಲ್ ಬಂದಿದ್ದ ಬಗ್ಗೆ ಮಾಹಿತಿ ಪಡೆದ ದುಷ್ಕರ್ಮಿಗಳು ಕೂಡಲೇ ಆತನ ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ. ಆರೋಪಿಗಳು ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ

Leave A Reply

Your email address will not be published.