ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮನ ಹುಟ್ಟುಹಬ್ಬಕ್ಕೆ ರೆಡ್ಡಿಯ ಕೊಡುಗೆ!!| ರವಿವರ್ಮನ ಕಲ್ಪನೆಯ ಸುಂದರಿಯಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿ ಸುದ್ದಿಯಾದ ಗಣಿಧನಿ

ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಎಲ್ಲರಿಗೂ ತಿಳಿದೇ ಇದೆ. ಇದೀಗ ರವಿವರ್ಮನ ಕಲಾಕೃತಿ ಕರ್ನಾಟಕದಲ್ಲಿ ಭಾರೀ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಕರ್ನಾಟಕದ ಪ್ರತಿಷ್ಠಿತ ರಾಜಕಾರಣಿ ಜನಾರ್ದನ ರೆಡ್ಡಿ. ಹೌದು. ರವಿವರ್ಮನ ಕುಂಚದಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಮೂಡಿದ್ದಾರೆ !! ಏನಪ್ಪಾ ಇದು ಅಂತೀರಾ…ಇದೆಲ್ಲಾ ಫೋಟೋಶೂಟ್ ಮಹಿಮೆ.

 

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣ ಲಕ್ಷ್ಮೀ ತಮ್ಮ ವಿಭಿನ್ನ ಫೋಟೋ ಶೂಟ್‌ಗಳ ಮೂಲಕ ಸುದ್ದಿಯಲ್ಲಿದ್ದಾರೆ. ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರ ಕಲಾಕೃತಿಗಳ ರೂಪದಲ್ಲಿ ಪೋಸ್ ಕೊಟ್ಟು, ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

29 ಏಪ್ರಿಲ್ 1848 ವಿಶ್ವಕಂಡ ಶ್ರೇಷ್ಠ ಚಿತ್ರಕಾರ ರಾಜಾ ರವಿವರ್ಮಾ ಅವರ ಹುಟ್ಟುಹಬ್ಬ. ಅದರ ನೆನಪಿಗಾಗಿ ಜನಾರ್ದನ್ ರೆಡ್ಡಿ ಅವರು ರವಿವರ್ಮಾ ಅವರ ಗ್ರೇಟ್ ಚಿತ್ರಗಳನ್ನು ಹೋಲುವಂತೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ರಾಜ ಮನೆತನದ ಅದ್ಭುತ ಕಲಾವಿದನನ್ನು ಸ್ಮರಿಸಿದ್ದಾರೆ.

ರವಿ ವರ್ಮಾ ರಾಜಮನೆತನದಲ್ಲಿ ಹುಟ್ಟಿದ್ದರೂ, ಅವರು ಕಲೆಗೆ ಕೊಟ್ಟ ಪ್ರೋತ್ಸಾಹ ಅಪಾರ. ಅಲ್ಲದೇ, ಅನೇಕ ಮಹರಾಜರು ಇವರನ್ನು ತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಂಡು ತಮ್ಮ ಪತ್ನಿಯರ ಸೌಂದರ್ಯವನ್ನು ಇವರ ಕುಂಚದ ಮೂಲಕ ಇಂಚಿಂಚೂ ಕಂಡವರು. ಅದರಲ್ಲೂ ಸಾಂಪ್ರದಾಯಿಕ ಉಡುಪಿನೊಂದಿಗೆ ರವಿವರ್ಮಾ ಚಿತ್ರಿಸಿದ ಮಹಿಳೆಯರು ಜಗತ್ತಿನ ಸುಂದರಿಯರಾಗಿ ಮೆರೆದವರು. ಇಂತಹ ಕೆಲವು ಚಿತ್ರಗಳಲ್ಲಿ ಆಯ್ದ ಕೆಲವು ಚಿತ್ರಗಳಿಗೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ ಜನಾರ್ದನ ರೆಡ್ಡಿ.

ರವಿವರ್ಮಾ ಪ್ರಪಂಚದಾದ್ಯಂತ ಹಲವಾರು ಪುರಸ್ಕಾರಗಳನ್ನು ಗಳಿಸಿದ್ದಾರೆ. ಬ್ರಿಟಿಷ್ ಮತ್ತು ಭಾರತೀಯ ರಾಜಮನೆತನದ ಎರಡೂ ಕುಟುಂಬಗಳು ಬ್ರಿಟಿಷ್ ರಾಜ್ ಸಮಯದಲ್ಲಿ ತಮ್ಮ ಕುಟುಂಬಗಳ ಭಾವಚಿತ್ರಗಳನ್ನು ಚಿತ್ರಿಸಲು ರವಿವರ್ಮರನ್ನು ಆಹ್ವಾನಿಸಿದವು. ಅವರ ಚಿತ್ರಿಸಿದ ಕೌಟುಂಬಿಕ ಚಿತ್ರಗಳನ್ನು ನೋಡಿ ರಾಜಮನೆತನ ಬೆರಗಾಗಿತ್ತು.

ಈ ಹಿಂದೆ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. 2016ರ ನವೆಂಬರ್ ನಲ್ಲಿ ನಡೆದ ಈ ಅದ್ಧೂರಿ ಮದುವೆ ‘ನ ಭೂತೋ, ನ ಭವಿಷ್ಯತಿ’ ಎನ್ನುವಷ್ಟು ಗ್ರ್ಯಾಂಡ್ ಆಗಿ ನೆರವೇರಿತ್ತು. 250 ಕೋಟಿಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ ಎನ್ನಲಾಗಿದ್ದು, ಇದು ವಿವಾದ ಹಾಗೂ ತೀವ್ರ ಚರ್ಚೆಗೂ ಕಾರಣವಾಗಿತ್ತು.

ಇನ್ನು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಕಿರಿಟಿ ರೆಡ್ಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

Leave A Reply

Your email address will not be published.