ಮಂಗಳೂರು : ಖಾದರ್ ನಾಡಿನಲ್ಲಿ ನಡು ರಸ್ತೆಯಲ್ಲೇ ವಾಹನ ಅಡ್ಡಲಾಗಿಟ್ಟು ನಮಾಜ್!! ಮೂಕ ಪ್ರೇಕ್ಷಕರಂತೆ ಆಕಾಶ ನೋಡುತ್ತಾ ನಿಂತ ಉಳ್ಳಾಲ ಪೊಲೀಸರ ವಿರುದ್ಧ ಎಲ್ಲೆಡೆ ಆಕ್ರೋಶ!
ಉಳ್ಳಾಲ: ಈದುಲ್ ಫಿತ್ರ್ ದಿನವಾದ ನಿನ್ನೆ ಇಲ್ಲಿನ ಬೀರಿ ಸಮೀಪ ಸಾರ್ವಜನಿಕ ಹೆದ್ದಾರಿಯಲ್ಲೇ ಪೊಲೀಸರ ಮುಂದೆಯೇ ರಸ್ತೆಗೆ ವಾಹನಗಳನ್ನು ಅಡ್ಡಲಾಗಿಟ್ಟು ನಮಾಜ್ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನವೊಂದು ಬೆಳಕಿಗೆ ಬಂದಿದ್ದು, ಸದ್ಯ ವಿಚಾರ ಜಿಲ್ಲಾಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏಕಾಏಕಿ ಜನರು ರಸ್ತೆಯಲ್ಲಿ ಸೇರಿ ನಮಾಜು ಮಾಡಲು ಶುರುವಿಟ್ಟುಕೊಂಡರು. ರಸ್ತೆಯಲ್ಲಿ ವಾಹನಗಳು ಹೋಗುತ್ತಿವೆ ಎಂಬ ಕಾರಣದಿಂದ ಕೆಲವರು ತಮ್ಮ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿದರು.
ಈದ್ ಪ್ರಯುಕ್ತ ಹೊಸ ಬಟ್ಟೆ ತೊಟ್ಟು ಸಂಭ್ರಮಾಚರಣೆ ಮಾಡುವುದು ಸಹಜ. ಆದರೆ ಪೊಲೀಸರ ಅಥವಾ ಸರಕಾರದ ಅನುಮತಿ ಇಲ್ಲದೆ, ಅದೂ ಹೋಗಿ ಬರುವ ರಾಜಾ ರಸ್ತೆಯನ್ನು ಜಬರ್ ದಸ್ತ್ ನಿಂದ ಬ್ಲಾಕ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಕೊಟ್ಟದ್ದಕ್ಕೆ ಟೀಕೆಗಳು ಕೇಳಿಬಂದಿವೆ.
ಜನಸಾಮಾನ್ಯರಿಗೆ ತೊಂದರೆಯಾಗುವ ಇಂತಹ ಕಾರ್ಯಗಳೇ ಮುಂದಕ್ಕೆ ಸಾರ್ವಜನಿಕರ ಮತ್ತು ಇತರ ಗುಂಪುಗಳ ಅಸಮಾಧಾನಕ್ಕೆ ಕಾರಣವಾಗಿ ಗುಂಪು ಗಲಭೆಗಳ ಸೃಷ್ಟಿಗೆ ಕಾರಣ ಆಗುತ್ತಿದ್ದರೂ, ಪೊಲೀಸರು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಘಟನೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದು, ರಸ್ತೆಯಲ್ಲಿ ನಮಾಜ್ ಮಾಡಿದ ವಿಚಾರ ಗಮನಕ್ಕೆ ಬಂದಿದ್ದರೂ ಕೂಡಾ ಉಳ್ಳಾಲ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶದೊಂದಿಗೆ ಪೊಲೀಸರ ಮೇಲೆ ಸಂಶಯ ವ್ಯಕ್ತವಾಗಿದ್ದು, ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗುತ್ತಿದೆ.
ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ವಿಶ್ವಹಿಂದೂ ಪರಿಷತ್ ಬಜರಂಗದಳ,ರಾಮ್ ಸೇನಾ ಕರ್ನಾಟಕ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕಾನೂನು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಲು ಆಗ್ರಹ ವ್ಯಕ್ತವಾಗಿದೆ.