ನೇಪಾಳದಲ್ಲಿ ಬೆಳ್ಳಗಿನ ಮಹಿಳೆಯೊಂದಿಗೆ ನೈಟ್ ಕ್ಲಬ್ ನಲ್ಲಿ ಪತ್ತೆಯಾದ ರಾಹುಲ್ ಗಾಂಧಿ!! | ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ-ಘಟನೆಯ ಬಗ್ಗೆ ವ್ಯಂಗ್ಯವಾಡಿದ ಬಿ.ಜೆ.ಪಿ
ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ತನ್ನ ಯಡವಟ್ಟುಗಳಿಂದಲೇ ಅತಿ ಹೆಚ್ಚು ಸುದ್ದಿಯಾದವರು ಎಂದು ಹೇಳಿದರೆ ತಪ್ಪಾಗದು. ಅನಗತ್ಯ ವಿಷಯಗಳಲ್ಲಿ ಟ್ರೋಲ್ ಆಗುತ್ತಿರುವ ‘ರಾಗಾ’ ಇದೀಗ ನೈಟ್ ಪಾರ್ಟಿಯಿಂದಾಗಿ ಬಿಸಿಬಿಸಿ ಸುದ್ದಿಯಲ್ಲಿದ್ದಾರೆ. ಹೌದು. ನೇಪಾಳದಲ್ಲಿ ನಡೆದ ನೈಟ್ ಪಾರ್ಟಿಯಲ್ಲಿ ಮಹಿಳೆಯೊಂದಿಗೆ ಎಂಜಾಯ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಪ್ರಧಾನಿ ವಿದೇಶಿ ಪ್ರವಾಸವನ್ನು ಟೀಕಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ವಿದೇಶಿ ಪ್ರವಾಸ ತೆರಳಿರುವ ರಾಹುಲ್ ಗಾಂಧಿ ಎಲ್ಲೂ ಕಾಣಿಸುತ್ತಿಲ್ಲ ಎಂದು ವರದಿಯಾದ ದಿನಗಳ ನಂತರ ಪಕ್ಕದ ದೇಶ ನೇಪಾಳದ ನೈಟ್‌ಕ್ಲಬ್‌ನಲ್ಲಿ ರಾಹುಲ್ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಹಂಚಿಕೊಂಡಿರುವ ಟ್ವಿಟರ್ ನ ಅಧಿಕೃತ ಖಾತೆಯೊಂದು, “ರಾಹುಲ್ ಗಾಂಧಿ ನೇಪಾಳದ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನೇಪಾಳದಲ್ಲಿ ನಡೆಯುವ ನೈಟ್ ಪಾರ್ಟಿಯಲ್ಲಿ ಏನಾಗುತ್ತದೆ ಎಂದು ನೀವು ಊಹಿಸಬಹುದು…!” ಎಂದು ಶೀರ್ಷಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಚೈನೀಸ್ ಅಂಬಾಸಿಡರ್ ಒಬ್ಬರ ಜೊತೆ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಈ ವೀಡಿಯೋಗೆ ನೆಟ್ಟಿಗರು ಭಾರೀ ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, “ರಾಹುಲ್ ಗಾಂಧಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ತನ್ನ ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ” ಎಂದು ಹೇಳಿದೆ.
ಇತ್ತ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಈ ವೀಡಿಯೋವನ್ನು ಹಂಚಿಕೊಂಡ ಬಿಜೆಪಿ ಐಟಿ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿದ್ದು, ಮುಂಬೈ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರ ಪಕ್ಷ ಶೋಚನೀಯ ಸ್ಥಿತಿಯಲ್ಲಿರುವ ಸಮಯದಲ್ಲಿ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರು ಸ್ಥಿರವಾಗಿರುತ್ತಾರೆ ಎಂದು ಬರೆದಿದ್ದಾರೆ. ಕಾಂಗ್ರೆಸ್ ತಮ್ಮ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊರಗಿನವರಿಗೆ ನೀಡಲು ನಿರಾಕರಿಸಿದ ಬೆನ್ನಲೇ ಈ ವೀಡಿಯೋ ಕೂಡ ಬಂದಿದ್ದು, ಕಾಂಗ್ರೆಸ್‌ನ ಪ್ರಧಾನ ಮಂತ್ರಿ ಅಭ್ಯರ್ಥಿ ವಿರುದ್ಧ ವ್ಯಾಪಕ ವಾಗ್ದಾಳಿ ಶುರುವಾಗಿದೆ.
ಪಕ್ಷ ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ರಾಹುಲ್ ವಿದೇಶದಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ನೆಟ್ಟಿಗರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷದ ಮೇಲೆ ವಿಚಾರ ಕೇಂದ್ರೀಕರಿಸಲು ಇಡೀ ಜಗತ್ತು ರಾಹುಲ್ ಗಾಂಧಿಗೆ ಉಪನ್ಯಾಸ ನೀಡುತ್ತಿದೆ. ಆದರೆ ರಾಹುಲ್ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾರೆ ನೋಡಿ. ದಯವಿಟ್ಟು ಅವರನ್ನು ಗೊಂದಲಗೊಳಿಸಬೇಡಿ ಎಂದು ಓರ್ವ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ. ಸುಮ್ನಿಮಾ ಮ್ಯಾನ್ಮಾರ್‌ನಲ್ಲಿರುವ ನೇಪಾಳದ ರಾಯಭಾರಿಯ ಮಗಳು. ಆದರೆ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಜೊತೆ ಕಾಣಿಸಿಕೊಂಡಿರುವ ಮಹಿಳೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಮಹಿಳೆಯನ್ನು ಹೌ ಯಾಂಕಿ ಎಂದು ಕರೆಯಲಾಗುತ್ತಿದೆಯಾದರೂ, ಆಕೆಯ ಬಗ್ಗೆ ನಿಖರ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲ. ಆದರೆ ಈ ಪ್ರಕರಣ ರಾಜಕೀಯ ಸಂಚಲನ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.