ಮೇ1-7 ಈ ವಾರದ ರಾಶಿ ಭವಿಷ್ಯ ಇಲ್ಲಿದೆ
ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ನಮ್ಮ ಭವಿಷ್ಯ, ರಾಶಿ ಫಲ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೀವನದಲ್ಲಿ ಮೇ 1ರಿಂದ ಮೇ 7ರಗೆ ರಾಶಿಫಲ ಹೇಗಿದೆ ಇಲ್ಲಿ ತಿಳಿಯಿರಿ.
ಮೇಷ
ಹೊಸ ಉದ್ಯಮ ಪ್ರಾರಂಭಿಸಲು ಸಾಕಷ್ಟು ಚಿಂತನೆ ಮಾಡುವಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಯೋಗವಿದೆ.
ವೃಷಭ
ಅಭಿವೃದ್ಧಿ ಇರುತ್ತದೆ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ನಿಧಾನಗತಿ ಇರಲಿದೆ.
ಮಿಥುನ
ಕೃಷಿಕರಿಗೆ ಇದ್ದ ಕೆಲವು ಆತಂಕ ದೂರವಾಗಿ ಅವರ ಬೆಳೆಗೆ ಉತ್ತಮ ಬೆಲೆ ದೊರೆಯುವ ಅವಕಾಶವಿದೆ. ವಿದ್ಯಾರ್ಥಿಗಳು ಅಭ್ಯಾಸದತ್ತ ಹೆಚ್ಚಿನ ಗಮನಹರಿಸುವುದು ಅಗತ್ಯ. ಸರ್ಕಾರದಿಂದ ಬರಬೇಕಾಗಿದ್ದ ಹಣ ಈಗ ಬರುತ್ತದೆ.
ಕಟಕ(ಕರ್ಕ)
ವಯಸ್ಕರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆಗಳಿವೆ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ವಿದ್ಯಾರ್ಥಿಗಳು ಈ ವಾರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಸಿಂಹ
ಹಲವಾರು ವೈಯಕ್ತಿಕ ಸಮಸ್ಯೆಗಳು ಕುಳಿತು ಆಲೋಚಿಸಿದಲ್ಲಿ ಪರಿಹಾರದ ದಾರಿ ಕಂಡು ಬರುತ್ತದೆ. ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳು ಈ ವಾರದಲ್ಲಿ ಅವರ ಮಹತ್ವಾಕಾಂಕ್ಷೆಯಂತೆ ಯಶಸ್ವಿಯಾಗಬಹುದು. ಆದರೆ ಅವರು ತಮ್ಮ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಬೇಕು.
ಕನ್ಯಾ
ವಿವಾಹ ಅಪೇಕ್ಷಿತರಿಗೆ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಅನೇಕ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ನೀವು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ಏಳಿಗೆ ಇರುತ್ತದೆ.
ತುಲಾ
ವ್ಯಾಪಾರ ಮಾಡುವ ಜನರು ಈ ವಾರ ಉತ್ತಮ ಲಾಭವನ್ನು ಗಳಿಸಬಹುದು. ನಮ್ರತೆಯ ಮೂಲಕ ನೀವು ಇತರರ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತದೆ.
ವೃಶ್ಚಿಕ
ನೀವು ಪ್ರತಿ ಹೆಜ್ಜೆಯನ್ನು ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮನೆಯ ಸದಸ್ಯರ ಸಲಹೆಯು ಈ ವಾರ ಹೆಚ್ಚುವರಿ ಹಣವನ್ನು ಗಳಿಸಲು ನಿಮಗೆ ಸಹಾಯ ಮಾಡುವ ಸಾಧ್ಯತೆಗಳಿವೆ,
ಧನು
ಹಿರಿಯರ ಸಲಹೆಗಳು ನಿಮಗೆ ವ್ಯವಹಾರದಲ್ಲಿ ಉತ್ತಮ ಮಾರ್ಗದರ್ಶನ ಮಾಡುತ್ತವೆ.
ಮಕರ
ವೃತ್ತಿಯಲ್ಲಿನ ಕೆಲವು ತೊಂದರೆಗಳು ನಿವಾರಣೆಯಾಗುತ್ತವೆ.
ಈ ಸಮಯವು ತುಂಬಾ ಮಂಗಳಕರವಾಗಿರುತ್ತದೆ
ಕುಂಭ
ನಿಮ್ಮ ವೈಯಕ್ತಿಕ ಜೀವನದಲ್ಲಿ ನಿರಂತರ ಏರಿಳಿತಗಳಿಂದಾಗಿ ನೀವು ಆತಂಕಕ್ಕೆ ಒಳಗಾಗುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ಬೆಂಬಲವನ್ನು ತೆಗೆದುಕೊಳ್ಳಬಹುದು.
ಮೀನ
ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಪ್ರೋತ್ಸಾಹಧನ ಸಿಗುವ ಸಾಧ್ಯತೆ ಇದೆ.