ಮುಸ್ಲಿಂರು ಚಹಾದಲ್ಲಿ ಬಂಜೆತನ ಬರುವ ಹನಿ ಹಾಕ್ತಾರೆ: ವಿವಾದತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಪಿ.ಸಿ.ಜಾರ್ಜ್
ಶುಕ್ರವಾರ ತಿರುವನಂತಪುರದಲ್ಲಿ ನಡೆಯುತ್ತಿದ್ದ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ “ಈ ಹಿಂದೂ ರಾಷ್ಟ್ರವನ್ನು ವಶಪಡಿಸಿಕೊಳ್ಳುವ ಗುರಿಯತ್ತ ಸಾಗುತ್ತಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು. ನಾನು ದಂಪತಿಗಳ ಮದುವೆಯಲ್ಲಿ ಭಾಗವಹಿಸಿದಾಗಲೆಲ್ಲ ನಾನು ಯಾವಾಗಲೂ ಈ ಬೇಡಿಕೆಯನ್ನು ಇಡುತ್ತೇನೆ. ಅವರಲ್ಲಿ ಕೆಲವರು ನನ್ನ ಸಲಹೆಯನ್ನು ಸಂತೋಷದಿಂದ ಒಪ್ಪುತ್ತಾರೆ ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳದ ಹಿರಿಯ ರಾಜಕಾರಣಿ ಪಿ ಸಿ ಜಾರ್ಜ್ ಅವರನ್ನು ಪೊಲೀಸರು ಭಾನುವಾರ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಫೋರ್ಟ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ಮುಂಜಾನೆ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದಲ್ಲಿರುವ ಅವರ ನಿವಾಸದಿಂದ ಜಾರ್ಜ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಜ್ ತಮ್ಮ ಭಾಷಣದಲ್ಲಿ ಕೇರಳದ ಹಿರಿಯ ನಾಯಕ ಮುಸ್ಲಿಮರು ಆಹಾರವನ್ನು ಉಗುಳಿದ ನಂತರ ಬಡಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಅವರನ್ನು ತಿರುವನಂತಪುರಕ್ಕೆ ಕರೆತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.