ಭಾರತೀಯ ಮಿಲಿಟರಿಯಲ್ಲಿ ಉದ್ಯೋಗ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಇಂಡಿಯನ್ ಮಿಲಿಟರಿಯು ಒಟ್ಟು 158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಹುದ್ದೆಗಳ ವಿವರ
1.ಬಾರ್ಬರ್ : 09
2.ಚೌಕಿದಾರ್: 12
3.ಎಲ್‌ಡಿಸಿ 03
4.ಸಫಾಯಿವಾಲಾ: 35
5.ಹೆಲ್ತ್ ಇನ್ಸ್ಪೆಕ್ಟರ್: 18

  1. ಟೀ- ಮೇಟ್ : 08
  2. ಕುಕ್ 3
  3. ವಾರ್ಡ್ ಸಹಾಯಕ: 53
  4. ವಾಷರ್‌ಮೆನ್: 17

ಒಟ್ಟು : 158

ವಿದ್ಯಾರ್ಹತೆ :
ಬಾರ್ಬರ್ : ಮೆಟ್ರಿಕ್ಯೂಲೇಷನ್ ಪಾಸ್ ಜತೆಗೆ, ಒಂದು ವರ್ಷ ಕಾರ್ಯಾನುಭವ.
ಚೌಕಿದಾರ್: ಮೆಟ್ರಿಕ್ಯೂಲೇಷನ್ ಪಾಸ್ ಜತೆಗೆ, ಒಂದು ವರ್ಷ ಕಾರ್ಯಾನುಭವ.
ಎಲ್‌ಡಿಸಿ : ಪಿಯುಸಿ ಜತೆಗೆ, ಇಂಗ್ಲಿಷ್, ಹಿಂದಿ ಟೈಪಿಂಗ್
ಗೊತ್ತಿರಬೇಕು.
ಸಫಾಯಿವಾಲಾ: ಮೆಟ್ರಿಕ್ಯೂಲೇಷನ್ ಪಾಸ್.
ಹೆಲ್ತ್ ಇನ್ಸ್‌ಪೆಕ್ಟರ್: ಎಸ್ಎಸ್ಎಲ್‌ಸಿ ಜೊತೆಗೆ, ಸ್ಯಾನಿಟರಿ ಇನ್ಸ್‌ಪೆಕ್ಟರ್ ಕೋರ್ಸ್ ಪಾಸ್.
ಕುಕ್ : ಎಸ್ಎಸ್ಎಲ್‌ಸಿ ಪಾಸ್ ಜತೆಗೆ, ಭಾರತೀಯ ಆಹಾರ ಸಂಸ್ಕೃತಿ ತಿಳಿದಿರಬೇಕು.
ಟ್ರೇಡ್ಸ್‌ಮೆನ್ ಮೇಟ್: ಮೆಟ್ರಿಕ್ಯೂಲೇಷನ್ ಜತೆಗೆ ಒಂದು ವರ್ಷ ಕಾರ್ಯಾನುಭವ.
ವಾರ್ಡ್ ಸಹಾಯಕ: ಎಸ್‌ಎಸ್‌ಎಲ್‌ಸಿ ಜತೆಗೆ, ಸಂಬಂಧಿಸಿದ ಟ್ರೇಡ್‌ನಲ್ಲಿ ಮೂರು ವರ್ಷ ಕಾರ್ಯಾನುಭವ.
ವಾಷರ್‌ಮೆನ್: ಮೆಟ್ರಿಕ್ಯೂಲೇಷನ್ ಪಾಸ್ ಜತೆಗೆ, ಮಿಲಿಟರಿ/ ಸಿವಿಲಿಯನ್ ಬಟ್ಟೆಗಳನ್ನು ವಾಷ್ ಮಾಡಲು ತಿಳಿದಿರಬೇಕು.

ಮೇಲೆ ನೀಡಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಲಿದ್ದು, ಪರೀಕ್ಷೆ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ನೋಟಿಫಿಕೇಶನ್‌ನಲ್ಲಿ ಹೇಳಲಾಗಿದೆ.

ಈ ಮೇಲಿನ ವಿವಿಧ ಹುದ್ದೆಗಳಿಗೆ ಪೇ ಮೆಟ್ರಿಕ್ ಲೆವೆಲ್-1, ಲೆವೆಲ್-2, ಲೆವೆಲ್-4 ವೇತನ ಶ್ರೇಣಿ ರೂ.18,000-81,100 ವರೆಗೆ ನೀಡಲಾಗುತ್ತದೆ.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರರಬಾರದು. ಹೆಲ್ತ್ ಇನ್ಸ್ಪೆಕ್ಟರ್ ಹುದ್ದೆಗೆ ಮಾತ್ರ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ : ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಸಲ್ಲಿಸಬಹುದು. ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗುವುದಿಲ್ಲ. ಅರ್ಜಿ ನಮೂನೆಯನ್ನು ಈ ಕೆಳಗಿನ ಪಿಡಿಎಫ್ ಫೈಲ್ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬೇಕಾದ ದಾಖಲೆಗಳು :
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, PUC ಅಂಕಪಟ್ಟಿ, ಕಾರ್ಯಾನುಭವ ಸರ್ಟಿಫಿಕೇಟ್, ಇತ್ತೀಚೆಗೆ ತೆಗೆಸಿದ ಭಾವಚಿತ್ರ, ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ದಾಖಲೆಗಳು.

ವೆಬ್ಸೈಟ್ ಲಿಂಕ್ ಇಲ್ಲಿದೆ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave A Reply

Your email address will not be published.