ಈ ವಿದ್ಯಾರ್ಥಿಯ SSLC ಉತ್ತರ ಪತ್ರಿಕೆ ನೋಡಿದ ಮೌಲ್ಯಮಾಪಕರೇ ಶಾಕ್!|ಅಷ್ಟಕ್ಕೂ ಅದರಲ್ಲಿ ಬರೆದಿದ್ದು ಏನು ಗೊತ್ತಾ!?
ಸಾಮಾನ್ಯವಾಗಿ ಪರೀಕ್ಷೆ ಅಂದಕೂಡಲೇ ಪ್ರತಿಯೊಬ್ಬ ವಿದ್ಯಾರ್ಥಿಯು ಹೆದರುವುದು ಮಾಮೂಲು.ಅದರಲ್ಲೂ ಪರೀಕ್ಷೆ ಮುಗಿದ ಮೇಲಂತೂ ಕೇಳುವುದೇ ಬೇಡ.ದೇವ್ರೇ ಒಳ್ಳೆ ರಿಸಲ್ಟ್ ಬರ್ಲಿ ಇಂದು ಪ್ರತಿನಿತ್ಯ ದೇವರಲ್ಲಿ ಬೇಡಿಕೊಳ್ಳುವವರೆ ಇದ್ದಾರೆ. ಇದೀಗ ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿದು ಮೌಲ್ಯಮಾಪನ ನಡೆಯುತ್ತಿದೆ. ಈ ಹಿಂದೆ ಬಯಲಾದ ಆನ್ಸರ್ ಪೇಪರ್ ಗಳಲ್ಲಿ ಮೌಲ್ಯ ಮಾಪಕರಿಗೆ ಕೆಲವು ಒಂದು ಪತ್ರಗಳನ್ನು ಬರೆದಿರುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ವಿದ್ಯಾರ್ಥಿಯ ಕೋರಿಕೆ ಕಂಡಂತ ಮೌಲ್ಯಮಾಪಕರೇ ಶಾಕ್ ಆಗಿದ್ದಾರೆ.
ಹೌದು.ವಿಜಯಪುರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವಂತ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯಲ್ಲಿನ ಮೌಲ್ಯಮಾಪನ ಕಂಡು ಶಾಕ್ ಆಗಿದ್ದಾರೆ.ಯಾಕೆಂದ್ರೇ ವಿದ್ಯಾರ್ಥಿಯೊಬ್ಬ ಉತ್ತರ ಬರೆಯೋ ಬದಲು, ಅದರಲ್ಲಿ ಬರೆದಿದ್ದು ಮಾತ್ರ ಹೀಗಿತ್ತು..ಅಷ್ಟಕ್ಕೂ ಉತ್ತರ ಪತ್ರಿಕೆಯಲ್ಲಿ ಇದ್ದ ಆ ಬೇಡಿಕೆ ಏನು ಗೊತ್ತಾ!?
‘ಮೌಲ್ಯ ಮಾಪನ ಮಾಡುತ್ತಿರುವ ನನ್ನ ಉಪಾಧ್ಯಾಯರೇ.. ನಿಮಗೆ ನನ್ನ ಸಾಸ್ಟಾಂಗ ನಮಸ್ಕಾರಗಳು.. ಏನೆಂದ್ರೇ.. ನಾನು ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 10 ವರ್ಷದಿಂದ ನೀರು ಘಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ನನಗೆ ಮುಂಬಡ್ತಿ ಇರುವುದರಿಂದ ಈ ಒಂದು ಪೇಪರ್ ಮೇಲೆ ನಿಂತಿದೆ.ಇದೊಂದನ್ನು ನನಗೆ ನಿಮ್ಮ ಒಳ್ಳೆಯ ಮನಸ್ಸಿನಿಂದ ನನ್ನನ್ನು ಪಾಸು ಮಾಡಿಕೊಡಿ. ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ. ನಾನೀಗ ಬಿಲ್ ಕಲೆಕ್ಟರ್ ಆಗುವ ಸಾಧ್ಯತೆ ಇದೆ. ನಿಮ್ಮಿಂದ ನನಗೆ ಅನ್ನ ಸಿಕ್ಕಿದಂತಾಗುತ್ತದೆ. ಉತ್ತೀರ್ಣ ಮಾಡಿಕೊಡಿ. ನನಗೆ ಇದೊಂದೆ ಪಾಸ್ ಆಗಬೇಕಾಗಿರುವುದು.
ಇಂತಿ ನಿಮ್ಮ ವಿದ್ಯಾರ್ಥಿ…’
ಎಂಬುದಾಗಿ ಉತ್ತರ ಪತ್ರಿಕೆಯಲ್ಲಿ ತನ್ನ ಇಡೀ ಕಷ್ಟವನ್ನು ಬರೆದುಕೊಂಡಿದ್ದಾನೆ. ವಿದ್ಯಾರ್ಥಿಯ ಈ ಉತ್ತರವನ್ನು ಕಂಡಂತ ಮೌಲ್ಯ ಮಾಪನಕಾರರೇ ಶಾಕ್ ಆಗಿದ್ದು,ಇದೀಗ ಈ ಉತ್ತರ ಪತ್ರಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿದೆ.