ಫ್ಲ್ಯಾಟ್ ವೊಂದರಲ್ಲಿ ನಿಗೂಢವಾಗಿ ಮರ್ಡರ್ ಆಗಿದ್ದ ಮಹಿಳೆಯ ಕೊಲೆ ರಹಸ್ಯ ಭೇದಿಸಿದ ಪೊಲೀಸರು | ಮಗನಂತೆ ಕಂಡ ವ್ಯಕ್ತಿಯಿಂದಲೇ ಕೊಲೆ| ಪ್ರೀಪ್ಲ್ಯಾನ್ಡ್ ಮರ್ಡರ್ ಮಿಸ್ಟ್ರಿ!

ಬೆಂಗಳೂರು: ಇ-ಕಾಮರ್ಸ್ ಉದ್ಯಮಿ ಸುನೀತಾ(54) ನಿಗೂಢವಾಗಿ ಕೊಲೆಯಾದ ಪ್ರಕರಣವೊಂದಕ್ಕೆ ಈಗ ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಕಿರಣ್‌ನ ಬಂಧಿಸಿದ್ದಾರೆ.

 

ಮಾರ್ಚ್ 31 ರಂದು ಮಲ್ಲೇಶ್ವರ ನಿವಾಸದಿಂದ ಬ್ಯುಸಿನೆಸ್ ಮೀಟಿಂಗ್ ಅಂತ ಹೇಳಿ ಉದ್ಯಮಿ ಮಹಿಳೆ ಹೊರಟಿದ್ದರು. ನಾಲ್ಕು ದಿನದ ಬಳಿಕ ವರ್ತೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹಲವು ಆಯಾಮಗಳಲ್ಲಿ ವರ್ತೂರು ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಈಗ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ.

ಸುನೀತಾ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದರು. ವಿಕಲಚೇತನ ಸೋದರಿ ಸಂಬಂಧಿಯೊಂದಿಗೆ ಮಲ್ಲೇಶ್ವರದ ಮನೆಯಲ್ಲಿ ವಾಸವಿದ್ದರು. ಲಿಫ್ಟ್ ಸೌಲಭ್ಯವುಳ್ಳ ಬಾಡಿಗೆ ಮನೆಗಾಗಿ ಹುಡುಕಾಡುತ್ತಿದ್ದರು. ವರ್ತೂರಿನ ಕಾಚರಕನಹಳ್ಳಿಯಲ್ಲಿ ಮನೆ ಇದೆ ಎಂದು ಕರೆಸಿಕೊಂಡಿದ್ದ ಆರೋಪಿ ಕಿರಣ್ ಕೊಲೆ ಮಾಡಿದ್ದ.

ಆರೋಪಿಗಳು ಮಾರ್ಚ್ 31 ರಂದು ವರ್ತೂರಿನ ಕಾಚರಕನಹಳ್ಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಸುನೀತಾ ಕಾಣೆಯಾಗಿ ನಾಲ್ಕು ದಿನದ ಬಳಿಕ ಸಂಬಂಧಿಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮೃತಪಟ್ಟ ಬಳಿಕ ನಾಲ್ಕು ದಿನಗಳವರೆಗೂ ಮೊಬೈಲ್ ರಿಂಗ್ ಆಗುತ್ತಿತ್ತು. ಸುನೀತಾ ಮೃತದೇಹದ ಬಳಿ ಸಿಕ್ಕ ಮೊಬೈಲ್ ಸುಳಿವು ನೀಡಿತ್ತು.

ಸುನೀತಾ ಸದಾಶಿವನಗರದಲ್ಲಿ ತತ್ವ ವಂಶಿ ಇ ಕಾಮರ್ಸ್ ಬ್ಯುಸಿನೆಸ್ ಮಾಡುತ್ತಿದ್ದರು. ಉದ್ಯಮಿ ಸುನೀತಾಗೆ ಆರು ತಿಂಗಳ ಹಿಂದೆ ಕಿರಣ್ ಪರಿಚಿತನಾಗಿದ್ದ. ಶ್ರೀಮಂತೆ ಸುನೀತಾ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿ ಕಿರಣ್, ಪರಿಚಿತನಾಗಿ ಕೊಲೆ ಮಾಡಿದ್ದಾನೆ.

ಸುನೀತಾ ಮೊಬೈಲ್ ನಂಬರ್ ಪಡೆದು ಪತ್ತೆಗೆ ಮುಂದಾಗಿದ್ದ ಪೊಲೀಸರಿಗೆ ವರ್ತೂರಿನಲ್ಲಿ ಸುನೀತಾ ಮೃತದೇಹ ಸಿಕ್ಕಿತ್ತು. ನಂತರ ಟೆಕ್ನಿಕಲ್ ಅನಾಲಿಸಿಸ್ ಮಾಡಿ ಆರೋಪಿಗಳನ್ನ ಅಂದರ್‌ ಮಾಡಿದ್ದಾರೆ.

ಆರೋಪಿ ಕಿರಣ್‌ನ ಮಗನಂತೆ ಕಾಣುತ್ತಿದ್ದ ಸುನೀತಾ ಆತನನ್ನು ನಂಬಿದ್ದರು. ಈತ ಕೂಡಾ ತಾಯಿಯ ರೀತಿ ಪ್ರೀತಿಸುವಂತೆ ನಾಟಕವಾಡಿ ಪುಸಲಾಯಿಸಿ ವಿಶ್ವಾಸ ಗಳಿಸಿದ್ದ. ನಂತರ ತಾಯಿ ವಾತ್ಸಲ್ಯ ತೋರಿದ್ದ ಸುನೀತಾರನ್ನು ಕೊಲೆಮಾಡಿ ಎಸ್ಕೇಪ್ ಆಗಿದ್ದ. ಹದಿನೈದು ಲಕ್ಷ ಹಣಕ್ಕಾಗಿ ಉದ್ಯಮಿಯನ್ನು ಕೊಂದೆ ಎಂದು ಹೇಳಿದ್ದಾನೆ. ಮೊದಲನೆ ಬಾರಿ ಅಂದುಕೊಂಡಂತೆ ಕೃತ್ಯ ಎಸಗಲು ಸಾಧ್ಯವಾಗಿರಲಿಲ್ಲ. ಎರಡನೇ ಬಾರಿ ಮನೆ ತೋರಿಸಲು ಕಾಚರಕನಹಳ್ಳಿಗೆ ಕರೆಸಿಕೊಂಡಿದ್ದ. ಅದೇ ಮನೆಯಲ್ಲಿ ಇಮ್ರಾನ್ ಮತ್ತು ವೆಂಕಟೇಶ ಸೇರಿಸಿಕೊಂಡು ಮರ್ಡರ್ ಮಾಡಿದ್ದಾರೆ.

Leave A Reply

Your email address will not be published.