ಉಳ್ಳಾಲ : ನಗರ ಸಭೆಯ ನೀರು ಕೇಳಿದ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ ಟ್ಯಾಂಕರ್ ಡ್ರೈವರ್!

Share the Article

ಉಳ್ಳಾಲ: ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ಚೆಂಬುಗುಡ್ಡ ಎಂಬಲ್ಲಿ ನಡೆದಿದೆ. ನೀರು ಸರಬರಾಜು ಮಾಡುವ ಟ್ಯಾಂಕರ್ ಡ್ರೈವರ್ ಒಬ್ಬ ರಿಜ್ವಾನ್ ಎಂಬ ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಲ್ಲೆಗೊಳಗಾದ ರಿಜ್ವಾನ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳ್ಳಾಲ ನಗರಸಭೆಯಿಂದ ನೀರಿನ ಗುತ್ತಿಗೆ ಪಡೆದಿದ್ದ ಬಸ್ತಿಪಡು ನಿವಾಸಿ ಖಲೀಲ್ ಟ್ಯಾಂಕರ್ ನಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ನೀರು ಸರಬರಾಜು ಮಾಡುತ್ತಿದ್ದಾಗ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದದಿಂದ ಬೈದಿದ್ದ. ಇದನ್ನು ಮಹಿಳೆಯ ಪುತ್ರ ರಿಝಾನ್ ಖಲೀಲ್ ಬಳಿ ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದು ಖಲೀಲ್ ರಿಝಾನ್ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ

Leave A Reply