ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ !
ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನ್ಯೂಸೊಂದನ್ನು ನೀಡಿದೆ. ಕೇಂದ್ರ ಸರ್ಕಾರ ರಾಜ್ಯ ಸಭಾ ಹಾಗೂ ಲೋಕಸಭಾ ಸದಸ್ಯರ ಕೋಟಾದಡಿ ನೀಡುತ್ತಿದ್ದ ಪ್ರವೇಶವನ್ನು ರದ್ದುಗೊಳಿಸಿದೆ. ಪ್ರಸಕ್ತ
ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಕೇಂದ್ರೀಯ ವಿದ್ಯಾಲಯಗಳು ದೇಶದಲ್ಲಿ ಒಟ್ಟಾಗಿ 1248 ಸಂಖ್ಯೆಯಷ್ಟಿದೆ. ಈ ವಿಶ್ವವಿದ್ಯಾಲಯಗಳಿಗೆ ಸಂಸದರ ಕೋಟಾದಲ್ಲಿ ಒಬ್ಬ ಸಂಸದರು 1ರಿಂದ 9ನೇ ತರಗತಿಯ 10 ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡಬಹುದಿತ್ತು. ಆದರೆ ಈಗ ಈ ನಿಯಮವನ್ನು ರದ್ದುಪಡಿಸಲಾಗಿದೆ. ಇದಲ್ಲದೇ ಇತರೆ ಹಲವು ವಿವೇಚನಾ ಕೋಟಾಗಳನ್ನು ರದ್ದುಗೊಳಿಸಿ ಕೇಂದ್ರೀಯ ವಿದ್ಯಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಸಂಸದರ ಕೋಟಾ ನಿಯಮ 1975 ರಲ್ಲಿ ಜಾರಿಗೆ ತರಲಾಗಿತ್ತು. ಈ ಹಿಂದೆಯೂ ಕೂಡಾ ಎರಡು ಬಾರಿ ಈ ಕೋಟಾವನ್ನು ರದ್ದುಗೊಳಿಸಲಾಗಿತ್ತು. ಈಗ ಮತ್ತೊಮ್ಮೆ ರದ್ದುಗೊಳಿಸಲಾಗಿದೆ. ದೇಶದಲ್ಲಿ ಒಟ್ಟು 543 ಲೋಕಸಭಾ ಸದಸ್ಯರು, 245 ರಾಜ್ಯಸಭಾ ಸದಸ್ಯರಿದ್ದು, ಇವರ ಕೋಟಾದಲ್ಲಿ ಪ್ರತಿ ವರ್ಷ 7,800 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು.
ಸಂಸದರ ಕೋಟಾದಡಿ ಪ್ರತಿಯೊಬ್ಬ ಸಂಸದರು, ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ 1 ರಿಂದ 9ನೇ ತರಗತಿಗಳ ಪ್ರವೇಶಕ್ಕಾಗಿ 10 ವಿದ್ಯಾರ್ಥಿಗಳನ್ನು ಶಿಫಾರಸು ಮಾಡುವ ನಿಯಮ ಇತ್ತು ಹಾಗೆನೇ ಈ ನಿಯಮದ ಪ್ರಕಾರ ಸಂಸದರು ಶಿಫಾರಸು ಮಾಡಿದ ವಿದ್ಯಾರ್ಥಿಗಳು ಅವರದೇ ಕ್ಷೇತ್ರದವರಾಗಿರಬೇಕಿತ್ತು.
ಹಾಗೆಯೇ ಇದರ ಜೊತೆಗೆ ಶಿಕ್ಷಣ ಸಚಿವಾಲಯದ ನೌಕರರು, ಸಂಸದರ ಅವಲಂಭಿತ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಸಿಬ್ಬಂದಿ, ಕೇಂದ್ರೀಯ ವಿದ್ಯಾಲಯದ ನೌಕರರು ಶಾಲಾ ಆಡಳಿತ ಮಂಡಳಿಯ
ಅಧ್ಯಕ್ಷರ ಕೋಟಾವನ್ನು ಕೂಡಾ ರದ್ದುಪಡಿಸಲಾಗಿದೆ.