ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈ ನಗರಗಳಿಗೆ ನೇರ ವಿಮಾನ ಸೇವೆ

ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಇಂಡಿಗೊ ಸಂಸ್ಥೆ ಬುಧವಾರದಿಂದ ನಿತ್ಯ ನೇರ ವಿಮಾನಯಾನ ಸೌಲಭ್ಯ ಆರಂಭಿಸಿತು.

40 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9.10ಕ್ಕೆ ಮುತ್ತಿನ ನಗರಿ ಹೈದ್ರಾಬಾದ್ ತಲುಪಿತು. 9.40ಕ್ಕೆ ಹೊರಟು ಇಲ್ಲಿಗೆ ಬೆಳಿಗ್ಗೆ 10.50ಕ್ಕೆ ಬಂದಿತು. 44 ಪ್ರಯಾಣಿಕರನ್ನು ಹೊತ್ತು ಬಂದ ವಿಮಾನಕ್ಕೆ ನಿಲ್ದಾಣದಲ್ಲಿ ಸಾಂಪ್ರದಾಯಿಕ ‘ವಾಟರ್‌ ಸೆಲ್ಯೂಟ್‌’ ಗೌರವ ಸಲ್ಲಿಸಲಾಯಿತು.

ಇಂಡಿಗೋ ಕಂಪನಿಯು ಹುಬ್ಬಳ್ಳಿಯಿಂದ ನವದೆಹಲಿಗೆ ಒನ್‌ ಸ್ಟಾಪ್‌ ಕೊಟ್ಟು ವಿಮಾನಯಾನ ಸೇವೆಯನ್ನು ಮೇ ತಿಂಗಳಿನಿಂದ ಆರಂಭಿಸಲು ಯೋಜಿಸಿದ್ದು, ಅದಕ್ಕಾಗಿ ಪ್ರಸ್ತಾವನೆ ಸಹ ಸಲ್ಲಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದಿಂದ ಅನುಮೋದನೆ ಸಿಗಬೇಕಿದೆ. ಅದು ದೊರೆತ ಕೂಡಲೇ ಬುಕ್ಕಿಂಗ್‌ ಆರಂಭಿಸಲು ಹಾಗೂ ವಿಮಾನಯಾನದ ದಿನಾಂಕ, ವೇಳಾಪಟ್ಟಿ ನಿಗದಿಗೊಳಿಸುವ ಬಗ್ಗೆ ಕೂಡ ಚಿಂತನೆ ನಡೆಸಿದೆ. 

ಇಂಡಿಗೋ ಕಂಪನಿ ಈಗಾಗಲೇ ಹುಬ್ಬಳ್ಳಿಯಿಂದ ಮುಂಬಯಿ, ಚೆನ್ನೈ, ಬೆಂಗಳೂರು, ಹೈದರಾಬಾದ್‌ಗೆ ವಿಮಾನಯಾನ ಸೇವೆ ಕಲ್ಪಿಸಿದ್ದು, ಮೇ 1ರಿಂದ ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನ ಹಾಗೂ ಮೇ 3ರಿಂದ ಮೈಸೂರಿಗೆ ವಾರದಲ್ಲಿ ಮೂರು ದಿನ ತನ್ನ ಎಟಿಆರ್‌ ನೇರ ವಿಮಾನಯಾನ ಸೇವೆ ಕೂಡ ಆರಂಭಿಸುತ್ತಿದೆ. ಆ ನಿಟ್ಟಿನಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಸಹ ಆರಂಭಿಸಿದೆ.

Leave A Reply

Your email address will not be published.