ವಿಟ್ಲ:ಆಯತಪ್ಪಿ ಕೆಳಕ್ಕೆ ಬಿದ್ದ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವು!! ಚರ್ಚ್ ಸಭಾಭವನ ಕಾಮಗಾರಿ ವೇಳೆ ನಡೆದಿದ್ದ ಘಟನೆ

Share the Article

ವಿಟ್ಲ: ಸಭಾಭವನದ ಫಿನಿಶಿಂಗ್ ಕಾಮಗಾರಿ ಮಾಡುತ್ತಿದ್ದ ವೇಳೆ ಲಕ್ಷ್ಮೀ ಮೂಲದ ಕಾರ್ಮಿಕ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವಿಟ್ಲ ಶೋಕಮಾತೆ ಇಗರ್ಜಿಯ ಅಧೀನಕ್ಕೊಳಪಟ್ಟ ಸಭಾಭವನದ ಫಿನಿಶಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಮೂಲದ ಕಾರ್ಮಿಕ ಜಯ ಪ್ರಕಾಶ್(25) ಮೃತಪಟ್ಟ ಕಾರ್ಮಿಕ ಎನ್ನಲಾಗಿದೆ.

ಏ. ೨೬ ರ ಸಂಜೆ ದುರ್ಘಟನೆ ಸಂಭವಿಸಿತ್ತು. ಚಿಕಿತ್ಸೆಗೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲಕ್ಷ್ಮೀ ಮೂಲದ ಕಾರ್ಮಿಕ ಜಯ ಪ್ರಕಾಶ್ ಅಸುನೀಗಿದ್ದಾರೆ.

Leave A Reply