ಈ ಸಮಯದಂದು ರೈಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಸ್ಥಗಿತ!

Share the Article

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತಾಂತ್ರಿಕ ಸುಧಾರಣೆಗಾಗಿ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನ ಇಂದು ರಾತ್ರಿ ಸುಮಾರು ಎರಡೂವರೆ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ತಾಂತ್ರಿಕ ಕಾರಣಗಳಿಂದಾಗಿ, ಭಾರತೀಯ ರೈಲ್ವೆ ನಿರ್ವಹಿಸುವ ಕಂಪ್ಯೂಟರೀಕೃತ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ ಮುಚ್ಚಲ್ಪಡುತ್ತದೆ

ಏಪ್ರಿಲ್ 26, ಮಂಗಳವಾರ ರಾತ್ರಿ 11:45 ರಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಅಂದರೆ ಏಪ್ರಿಲ್ 27, ಬುಧವಾರ ಬೆಳಿಗ್ಗೆ 2.15 ರವರೆಗೆ ಆನ್ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, ಮೀಸಲಾತಿ, ರದ್ದತಿ, ಮೀಸಲಾತಿ ಚಾರ್ಟ್-ಮೇಕಿಂಗ್ ಮತ್ತು ವಿಚಾರಣಾ ಕೌಂಟರ್ ಸೇವೆ ಸೇರಿದಂತೆ ಪಿಆರ್‌ಎಸ್‌ಗೆ ಸಂಬಂಧಿಸಿದ ಇತರ ಸೇವೆಗಳನ್ನ ಸಹ ಮುಚ್ಚಲಾಗುತ್ತದೆ. 

Leave A Reply