ಪುತ್ತೂರು : ಕೋಮುಸೌಹಾರ್ದತೆ ಧಕ್ಕೆ ಉಂಟು ಮಾಡಿದ ಪೋಸ್ಟ್ | ಗೃಹರಕ್ಷಕ ಸಿಬ್ಬಂದಿ ಅಮಾನತು

ಪುತ್ತೂರು: ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಪೋಸ್ಟ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಗೃಹರಕ್ಷಕ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

 

ಪುತ್ತೂರಿನ ಸಾಲ್ಮರ ನಿವಾಸಿ ಸಲಾಮುದ್ದೀನ್ ನೌಷದ್ ಗೃಹರಕ್ಷಕ ದಳದ ಸಿಬ್ಬಂದಿ. ಕಟೀಲು ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ತೂಟೆದಾರ(ಬೆಂಕಿ ಕಾಳಗ)ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಇದನ್ನು ಗಮನಿಸಿದ ಶಾಸಕ ಸಂಜೀವ ಮಠಂದೂರು ಅವರು ಗೃಹರಕ್ಷಕ ದಳದ ಜಿಲ್ಲಾ ಕಂಮಾಂಡೆಂಟ್ ಮುರಳಿ ಮೋಹನ್ ಚೂಂತಾರು ಅವರ ಗಮನಕ್ಕೆ ತಂದಿದ್ದರು.ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಆತನನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ

Leave A Reply

Your email address will not be published.