ನಾಳೆ ಜೈನ ಕಾಶಿ ಮೂಡಬಿದ್ರೆಗೆ ಮುಖ್ಯಮಂತ್ರಿ ಬೊಮ್ಮಾಯಿ!! ವಾಹನ ಸಂಚಾರದಲ್ಲಿ ಬದಲಾವಣೆ-ಇಲ್ಲಿದೆ ಬದಲಿ ರಸ್ತೆಗಳ ಮಾಹಿತಿ
ಮಂಗಳೂರು: ಇಲ್ಲಿನ ಬಹುದಿನದ ಬೇಡಿಕೆಯಾದ ತಾಲೂಕು ರಚನೆ ಹಾಗೂ ನೂತನವಾಗಿ ನಿರ್ಮಾಣಗೊಂಡ ಮಿನಿ ವಿಧಾನಸೌಧದ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿಲಿದ್ದು ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಪೇಟೆ ಸಹಿತ ಹಲವೆಡೆ ಕೇಸರಿ ಮಯವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರ ಅವಿರತ ಶ್ರಮದಿಂದ ರಾಜ್ಯದಲ್ಲೇ ಮಾದರಿ ಆಡಳಿತ ಸೌಧ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದು, ಶಾಸಕರ ಶ್ರಮವನ್ನು ಅಭಿನಂದಿಸಿ,ತಾಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸ್ವಾಗತ ಕೋರಿದರು.
ವಾಹನ ಸಂಚಾರದಲ್ಲಿ ಬದಲಾವಣೆ:
ಮುಖ್ಯಮಂತ್ರಿ ಬರುವ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಸೇರಲಿದ್ದು ವಾಹನ ದಟ್ಟನೆಯಾಗುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
1) ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಹೋಗುವ ಪ್ರಯಾಣಿಕರು ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಕೋಟೆಬಾಗಿಲು ಸುಭಾಸ್ ನಗರ ರಸ್ತೆ ಮೂಲಕ ಸಂಚರಿಸುವುದು.
2)ಬಂಟ್ವಾಳ ಕಡೆಯಿಂದ ಬರುವ ಪ್ರಯಾಣಿಕರು ಕೀರ್ತಿನಗರ ಜಂಕ್ಷನ್ ನಲ್ಲಿ ಪ್ರವೇಶಿಸಿ ಮಹಾವೀರ ಕಾಲೇಜು ಬಳಿ ಬಲಕ್ಕೆ ತಿರುಗಿ ಮುಂದುವರಿಯುವುದು.
3)ಶಿರ್ತಾಡಿ ಕಡೆಯಿಂದ ಬರುವ ವಾಹನಗಳು ಜೈನ್ ಪೇಟೆಯಿಂದ ಅಲಂಗಾರು ಮಾರ್ಗವಾಗಿ ರಿಂಗ್ ರೋಡ್ ಮೂಲಕ ಸಂಚರಿಸುವುದು.
4)ಕಾರ್ಕಳದಿಂದ ಬೆಳ್ತಂಗಡಿ-ಬಿ.ಸಿ ರೋಡ್ ಪ್ರಯಾಣಿಸುವ ಪ್ರಯಾಣಿಕರು ಜೈನ್ ಪೇಟೆಯಿಂದ ಶಿರ್ತಾಡಿ ರಸ್ತೆಯಲ್ಲಿ ಸಂಚರಿಸಿ ಕೋಟೆಬಾಗಿಲು ಕೋಡಂಗಲ್ಲು ರಸ್ತೆಯಲ್ಲಿ ಸಂಚರಿಸುವುದು.
5)ಕಾರ್ಕಳದಿಂದ ಮೂಡುಬಿದ್ರೆ -ಮಂಗಳೂರು-ಮುಲ್ಕಿ ಹೋಗುವ ಪ್ರಯಾಣಿಕರು ಅಲಂಗಾರ್ ಜಂಕ್ಷನ್ ನಲ್ಲಿ ತಿರುಗಿ ರಿಂಗ್ ರೋಡ್ ನಲ್ಲಿ ಮುಂದುವರಿಯುವುದು.
6)ಮಂಗಳೂರು ಕಡೆಯಿಂದ ಕಾರ್ಕಳ ಬೆಲ್ಮಣ್ ಹೋಗುವ ಪ್ರಯಾಣಿಕರು ರಿಂಗ್ ರೋಡ್ ನಲ್ಲಿ ಸಂಚರಿಸುವುದು.
7)ಮಂಗಳೂರಿನಿಂದ ಮೂಡುಬಿದ್ರೆ ಹೋಗುವ ವಾಹನಗಳು ವಿದ್ಯಾಗಿರಿ ಮಾಸ್ತಿಕಟ್ಟೆಯಾಗಿ ಲಾವಂತಬೆಟ್ಟು ರಸ್ತೆಯಲ್ಲಿ ಸಂಚರಿಸುವುದು.