ಮೀನುಗಾರರ ಬಲೆಗೆ ಬೆಲೆ ಏರಿಕೆ ಬಿಸಿ
ಏಪ್ರಿಲ್-ಮೇ ತಿಂಗಳು ವಿಫುಲವಾಗಿ ಮೀನುಗಾರಿಕೆ ನಡೆಸುವ ಸಮಯ. ಆದರೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವ ಡೀಸೆಲ್ ವೆಚ್ಚದಿಂದಾಗಿ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ.
ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು 5 ಲಕ್ಷ ರೂ. ವರೆಗೆ ಒಂದು ಟ್ರಿಪ್ಗೆ ಖರ್ಚಾಗುತ್ತದೆ. ಆದರೆ, ಮೀನುಗಾರಿಕೆಗೆ ತೆರಳುತ್ತಿರುವ ಬೋಟ್ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ.