ಮಂಗಳೂರು : ಬಡ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಸೆಳೆಯುತ್ತಿದ್ದ ಪ್ರಕರಣ ; 17 ಮಂದಿಯ ಬಂಧನ- ಅಂದಾಜು 10,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

ಮಂಗಳೂರು : ಪಿಯುಸಿ ಹುಡುಗಿಯರನ್ನು
ವೇಶ್ಯಾವೃತ್ತಿಗೆ ದುಡ್ಡು ಹಾಗೂ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ವೃತ್ತಿಗೆ ಸೆಳೆಯುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದರು. ಎರಡು ತಿಂಗಳ ಕಾಲ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಂಬತ್ತು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದು ಈಗ ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.

 

ಈ ಪ್ರತೀ ಎಫ್‌ಐಆರ್ ನಲ್ಲಿಯೂ ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿದೆ. ಪ್ರತೀ ಚಾರ್ಜ್ ಶೀಟ್ ನಲ್ಲಿಯೂ ಆಯಾ ಪ್ರಕರಣ ಸಂಬಂಧಿಸಿ ಸಮಗ್ರ ದಾಖಲೆಗಳನ್ನೂ ಜೊತೆಗಿರಿಸಲಾಗುತ್ತದೆ. ಪ್ರತೀ ಎಫ್‌ಐಆರ್ ನಲ್ಲಿ ಇನ್ನೂರು ಪುಟಗಳ ದಾಖಲೆಯೇ ಇರಲಿದೆ. ಅಂದಾಜಿನಂತೆ ಒಂದು ಎಫ್‌ಐಆರ್ ಅಡಿ 1200 ಪುಟಗಳ ಆರೋಪ ಪಟ್ಟಿಯನ್ನು ಮಾಡಲಾಗುತ್ತಿದೆ.

ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದ್ದು ಜೈಲಿಗೆ ಅಟ್ಟಿಸಲಾಗಿದೆ. ಇದರಲ್ಲಿ ಹಲವಾರು ಮಂದಿ ಇದ್ದಾರೆ. ವ್ಯಾಪಾರಿಗಳು, ವಿದೇಶದಲ್ಲಿದ್ದವರು, ವಿವಿಧ ವೃತ್ತಿಗಳಲ್ಲಿದ್ದವರು ಸೇರಿದ್ದಾರೆ. ಇನ್ನೊಬ್ಬ ವಿದೇಶದಲ್ಲಿರುವ ವ್ಯಕ್ತಿಯನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಆತ ದೇಶಕ್ಕೆ ಮರಳಿದ ಕೂಡಲೇ ಬಂಧಿಸಲು ಬೇಕಾದ ಕ್ರಮ ಜರುಗಿಸಲಾಗಿದೆ. ಅದಕ್ಕೂ ಮೊದಲೇ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿ ಹತ್ತು ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಕೆಯಾದರೆ, ಇದು ಮಂಗಳೂರಿನ ಮಟ್ಟಿಗೆ ಹೊಸ ದಾಖಲೆ ಸೃಷ್ಟಿ ಮಾಡಲಿದೆ ಎನ್ನಲಾಗುತ್ತಿದೆ.

ಈ ಪ್ರಕರಣ ಫೆಬ್ರವರಿ ಮೊದಲ ವಾರದಲ್ಲಿ ಬೆಳಕಿಗೆ ಬಂದಿತ್ತು. ಮೊದಲಿಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸಿಸಿಬಿಗೆ ವಹಿಸಿ ತನಿಖೆಗೆ ಒಳಪಡಿಸಲಾಗಿತ್ತು. ಅನಂತರ ನಾಲ್ಕು ಅಪ್ರಾಪ್ತ ಯುವತಿಯರನ್ನು ದಂಧೆಗೆ ಬಳಸಿದ್ದು ಪತ್ತೆ ಮಾಡಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಅತ್ತಾವರದ ನಂದಿಗುಡ್ಡೆಯ ಫ್ಲ್ಯಾಟ್ ಒಂದರಲ್ಲಿ ಮೊದಲ ಬಾರಿಗೆ ಹಣಕ್ಕಾಗಿ ಕಾಲೇಜು ಯುವತಿಯರನ್ನು ವೇಶ್ಯಾ ದಂಧೆಗೆ ನೂಕಿದ್ದನ್ನು ಪತ್ತೆ ಮಾಡಲಾಗಿತ್ತು. ಆನಂತರ ತನಿಖೆಯ ಸಂದರ್ಭದಲ್ಲಿ ಮಂಗಳೂರು ನಗರದ ಬೇರೆ ಬೇರೆ ಭಾಗದಲ್ಲಿ ಹಲವು ಕಾಲೇಜು ಯುವತಿಯರನ್ನು ಮುಂದಿಟ್ಟು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು

Leave A Reply

Your email address will not be published.