ಬೆಳ್ತಂಗಡಿ : ಮುಂಡಾಜೆ ಮನೆಯೊಂದರಲ್ಲಿ ಕಳ್ಳತನ |ಮನೆಮಂದಿ ಮನೆಯಲ್ಲಿರುವಾಗಲೇ ನಡೆದ ಘಟನೆ !

Share the Article

ಬೆಳ್ತಂಗಡಿ: ಇಲ್ಲಿನ ಮುಂಡಾಜೆ ಗ್ರಾಮದಲ್ಲಿ ಕಳ್ಳತನ ನಡೆದಿರುವ ಘಟನೆಯೊಂದು ನಡೆದಿದೆ. ಒಂಜರೆಬೈಲು ನಿವಾಸಿ ಹರ್ಷ ಭಟ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶನಿವಾರ ತಡರಾತ್ರಿ ಕಳ್ಳರ ಮುಂಬಾಗಿಲಿನ ಚಿಲಕವನ್ನು ಕಿಟಕಿ ಮೂಲಕ ತೆಗೆದು ಒಳ ಪ್ರವೇಶಿಸಿ, ಮನೆಯಲ್ಲಿದ್ದ ಆರು ಪವನ್ ಚಿನ್ನ ಹಾಗೂ 14 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.

ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಇನ್ವಟರ್ ಸಿಸ್ಟಮ್ ಆಫ್ ಆಗಿದ್ದರಿಂದ ಕೂಡಲೇ ಮನೆಯವರು ಎಚ್ಚರಗೊಂಡಿದ್ದಾರೆ. ಈ ವೇಳೆ ಮನೆ ಎದುರಿನ ಬಾಗಿಲಿನ ಬಳಿ ಓರ್ವ ಕಂಡಿದ್ದಾನೆ. ಆಗ ಮನೆಮಂದಿ ಬೊಬ್ಬೆ ಹೊಡೆದಿದ್ದಾರೆ. ಬೊಬ್ಬೆ ಹೊಡೆಯುತ್ತಿದ್ದಂತೆ ಕಳ್ಳ ಓಡಿ ಹೋಗಿದ್ದಾನೆಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಒಟ್ಟು 5 ಜನ ಇದ್ದು ,2 ಬೆಡ್ ರೂಮ್ ಗಳಲ್ಲಿ ಮಲಗಿದ್ದರು. ಇನ್ನೊಂದು ಬೆಡ್ ರೂಮಿಗೆ ನುಗ್ಗಿದ ಕಳ್ಳರು ಅದೇ ರೂಮಿನಲ್ಲಿದ್ದ ಕಪಾಟಿನ ಬೀಗದ ಕೈ ಉಪಯೋಗಿಸಿ ನಗ ನಗದು ದೋಚಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೋಲಿಸ್ ಶ್ವಾನದಳವನ್ನು ಕರೆತರಲಾಗಿದ್ದು ಶ್ವಾನವು ಮನೆಯಿಂದ 500 ಮೀ.ದೂರದವರೆಗೆ ಮುಖ್ಯರಸ್ತೆಯಲ್ಲಿ ಕ್ರಮಿಸಿ ವಾಪಸ್ಸಾಗಿದೆ.

Leave A Reply