ಬೈಕ್ ಟಚ್ ಆಯ್ತು ಎಂಬ ವಿಷಯಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು!

Share the Article

ಬೆಂಗಳೂರು : ಬೈಕ್ ಟಚ್ ಆಯ್ತು ಎಂದು ಯುವಕರ ಗುಂಪೊಂದು ಓರ್ವ ಯುವಕನ ಜೊತೆ ಗಲಾಟೆ ಮಾಡಿದ್ದು, ಕೊನೆಗೆ ಬರ್ಬರವಾಗಿ ಕೊಲೆ ಮಾಡಿದ ಘಟನೆಯೊಂದು ಬೆಂಗಳೂರಿನ ಕೆಂಗೇರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸ್ನೇಹಿತರ ಜೊತೆ ಕೆಂಗೇರಿ ಕರಗ ನೋಡಲು ಬಂದಿದ್ದ ಭರತ್ ಮೃತಪಟ್ಟ ಯುವಕ.

ಕೆಂಗೇರಿಯಲ್ಲಿ ನಡೆಯುತ್ತಿದ್ದ ಕರಗದ ವೇಳೆ ನಡೆದ ಸಣ್ಣ ಗಲಾಟೆಯಲ್ಲಿ ಗುರಾಯಿಸಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕರು ಭರತ್‌ನನ್ನು ಅಮಾನುಷವಾಗಿ ಕೊಂದು ಹಾಕಿದ್ದಾರೆ.

ಜಗಳ ಅತಿರೇಕಕ್ಕೆ ಹೋಗಿ 10 ಜನ ಯುವಕರನ್ನು ಕರೆಸಿದ ಪುಂಡರ ಗುಂಪು ಭರತ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಈ ದುರ್ಘಟನೆ ಕೆಂಗೇರಿ ರೈಲ್ವೆ ಟ್ರ್ಯಾಕ್ ಬಳಿ ನಡೆದಿದ್ದು, ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲ್ವೆ ಸಿಬ್ಬಂದಿ ಯುಡಿಆರ್ ಪ್ರಕರಣವೊಂದರ ಪರಿಶೀಲನೆ ನಡೆಸುವಾಗ ಗುಂಪಾಗಿ ಗ್ಯಾಂಗ್‌ವೊಂದು ದೇಹ ಎಳೆದುಕೊಂಡು ಹೋಗ್ತಿರೋದು ಕಂಡು ಬಂದಿದೆ.

ಆ ವೇಳೆ ರೈಲ್ವೆ ಸಿಬ್ಬಂದಿ ಅವರ ಬಳಿ ಹೋಗಲು ಮುಂದಾದಾಗ ಆರೋಪಿಗಳು ಮೃತದೇಹ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ರೈಲ್ವೆ ಎಸ್ಪಿ ಸಿರಿಗೌರಿ ಮಾಹಿತಿ

Leave A Reply