ವಿಮಾನದಲ್ಲಿ ಪ್ರಯಾಣಿಸುವಾಗ ಮಹಿಳೆಗೆ ಲೈಂಗಿಕ ಕುಚೇಷ್ಟೆ | ಮಹಿಳೆಯ ಎದೆ ಭಾಗವನ್ನು ಬಲವಾಗಿ ಮುಟ್ಟಿದ ಆರೋಪ!

ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

 

ಎಚ್‌ಎಂಟಿ ಲೇಔಟ್‌ನ 27 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಚೆನ್ನೈನ ಕೋಡಬಾಕಂನ ಕೃಷ್ಣನ್(30) ಎಂಬಾತನನ್ನು ಬಂಧಿಸಿದ ಪೊಲೀಸರು ಠಾಣಾ ಜಾಮೀನಿನ ಮೇಲೆ ಆತನನ್ನು ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರು ಮೂಲದ ಮಹಿಳೆ ಏ.18ರಂದು ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ (ಸಂಖ್ಯೆ 6ಇ-6225) ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿ ಆಸನದಲ್ಲಿ ಕುಳಿತ್ತಿದ್ದ ಕೃಷ್ಣನ್ ಹಿಂಬದಿಯಿಂದ ಕೈ ಹಾಕಿ ಮಹಿಳೆಯ ಎದೆ ಭಾಗವನ್ನು ಬಲವಾಗಿ ಮುಟ್ಟಿದ್ದಾನೆ. ಈ ವೇಳೆ ಮಹಿಳೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಕೃಷ್ಣನ್ ಮತ್ತೆ ಮೂರು-ನಾಲ್ಕು ಬಾರಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಆ ಮಹಿಳೆ ವಿಮಾನದ ಸಿಬ್ಬಂದಿಯನ್ನು ಕರೆದು ಕೃಷ್ಣನ್‌ನ ಚೇಷ್ಟೆಯ ಬಗ್ಗೆ ಹೇಳಿದ್ದಾರೆ. ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ, ಮಹಿಳೆ ಘಟನೆ ಸಂಬಂಧ ಬಿಐಎಎಲ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ವಿಮಾನ ನಿಲ್ದಾಣದಲ್ಲೇ ಆರೋಪಿ ಕೃಷ್ಣನ್‌ನನ್ನು ಬಂಧಿಸಿದ ಪೊಲೀಸರು, ಆತನ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

Leave A Reply

Your email address will not be published.