ಮಂಗಳೂರು : ಎ.26 ಖಾಸಗಿ ಕಂಪನಿಗಳ ನೇರ ಸಂದರ್ಶನ| ಪಿಯುಸಿ, ಐಟಿಐ,ಡಿಪ್ಲೋಮಾ ಹಾಗೂ ಪದವಿ ತೇರ್ಗಡೆಯಾದವರಿಗೆ ಭರಪೂರ ಉದ್ಯೋಗವಕಾಶ!!!

ಮಂಗಳೂರು: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪೆನಿಗಳ ನೇರ ಸಂದರ್ಶನವನ್ನು ಇದೇ ಏ.26ರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.

 

ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ (ಬಿ.ಇ ಮತ್ತು ಬಿ.ಸಿ.ಎ ಹೊರತುಪಡಿಸಿ) ಆಸಕ್ತ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ನಗರದ ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಜಯಲಕ್ಷ್ಮೀ ಸಿಲ್ಕ್ಸ್, ಗರೋಡಿ ಸ್ಟೀಲ್ಸ್, ಮೆಡ್ ಪ್ಲಸ್, ಪೈ ಇಂಟರ್ ನ್ಯಾಷನಲ್, ಬ್ರೈಟ್ ಫ್ಲೆಕ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ಸಾಯಿ ರಾಧಾ ಟಿ.ವಿ.ಎಸ್. ಕಂಪೆನಿಗಳು ಭಾಗವಹಿಸಲಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ:0824 – 2457139 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.