ಬೆಂಗಳೂರಿನಲ್ಲಿ ತನ್ನ 5 ವರ್ಷದ ಮಗುನ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ಮಹಿಳೆ!

ರಾತ್ರಿ ಊಟ ಮಾಡಿ ಚೆನ್ನಾಗಿಯೇ ಇದ್ದ ಹೆಂಡತಿ ಬೆಳಗ್ಗೆ ಗಂಡ ಬಾಗಿಲು ಬಡಿದಾಗ, ಎಷ್ಟೇ ಹೊತ್ತಾದರೂ ಬಾಗಿಲು ತೆಗೆಯದೇ ಇದ್ದುದ್ದನ್ನು ಕಂಡು ದಿಗಿಲುಗೊಂಡು, ಅಕ್ಕಪಕ್ಕದವರನ್ನು ಕರೆದು ಬಾಗಿಲು ಹೊಡೆದು ಒಳ ಹೋದಾಗ ಶಾಕ್ ಕಾದಿತ್ತು. ಅಲ್ಲಿ ಆತನ ಹೆಂಡತಿ ಹಾಗೂ ಮಗನ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಪತ್ನಿ, ಹಾಗೂ ತನ್ನ 5 ವರ್ಷದ ಮಗನ ಮೃತದೇಹ ಕಂಡು ಗಂಡ ಮಾತು ಬಾರದೇ ಹಾಗೇ ಬಿದ್ದು ಬಿಟ್ಟಿದ್ದಾನೆ.

 

ಈ ಹೃದಯವಿದ್ರಾವಕ ಘಟನೆ ನಡೆದಿರುವುದು ಬೆಂಗಳೂರಿನ ಬಸವನಪುರ ಬಾಡಿಗೆ ಮನೆಯೊಂದರಲ್ಲಿ ಸಂಭವಿಸಿದೆ. ಮಂಗಳೂರು ಮೂಲದ ರೋಹಿಣಿ ಶೆಟ್ಟಿ (33) ಮತ್ತು ಈಕೆಯ ಪುತ್ರ ಸಿಯಾನ್ ಶೆಟ್ಟಿ ( 5 ವರ್ಷ) ಮೃತ ದುರ್ದೈವಿಗಳು.

12 ವರ್ಷಗಳ ಹಿಂದೆ ರೋಹಿಣಿ ಅವರ ತಾಯಿ ನೇಣಿಗೆ ಶರಣಾಗಿದ್ದರಿಂದ, ಮಾನಸಿಕವಾಗಿ ಕುಗ್ಗಿಹೋಗಿದ್ದರು ರೋಹಿಣಿ. ಆ ನಡುವೆ ಪ್ರವಿಣ್ ಎಂಬುವರ ಜತೆ ರೋಹಿಣಿಯ ಮದುವೆ ಆಗಿತ್ತು. ದಂಪತಿಗೆ 5 ವರ್ಷದ ಮಗ ಇದ್ದ. ಮದುವೆಯಾದ ಬಳಿಕ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಹಿಣಿಗೆ ವೈದ್ಯರಿಂದ ಚಿಕಿತ್ಸೆ ಸಹ ಕೊಡಸಲಾಗಿತ್ತು.

ಎ.17 ರ ರಾತ್ರಿ ಊಟ ಮಾಡಿ ಪ್ರತ್ಯೇಕ ಕೋಣೆಯಲ್ಲಿ ದಂಪತಿ ಮಲಗಿದ್ದರು. ರೋಹಿಣಿ ಜೊತೆ ಮಗ ಕೂಡಾ ಮಲಗಿದ್ದ.

ಮಾರನೇ ದಿನ ಬೆಳಗ್ಗೆ ಪತ್ನಿ ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡ ಪ್ರವಿಣ್, ಸ್ಥಳೀಯರ
ಸಹಾಯದಿಂದ ಬಾಗಿಲು ಹೊಡೆದು ಒಳಗೆ ಪ್ರವೇಶಿಸಿದಾಗ ಪತ್ನಿ-ಮಗನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 5 ವರ್ಷದ ಮಗನನ್ನು ಕೊಂದು ಮಾಡಿ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹುಳಿಮಾವು ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮೃತಳ ಸಹೋದರಿ ಮೋಹಿನಿ ದೂರು ನೀಡಿದ್ದಾರೆ.

Leave A Reply

Your email address will not be published.