ಮಂಗಳೂರು:ಕಪಿಲ ಗೋ ಶಾಲೆಗೆ ಹಾಡಹಗಲೇ ಕಾಡಿದೆ ಕಂಟಕ!! ಮೇಯಲು ಹೋದ ದನಗಳು ಸೇರುತ್ತಿಲ್ಲ ಹಟ್ಟಿಗೆ

ಮಂಗಳೂರು: ನಗರದ ಹೊರವಲಯದ ಮರವೂರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋ ಶಾಲೆಗೆ ಗೋ ಕಳ್ಳರ ಕಣ್ಣು ಬಿದ್ದಿದ್ದು, ಕೇವಲ ಎರಡು ತಿಂಗಳಲ್ಲೇ ಸುಮಾರು 40 ಕ್ಕೂ ಹೆಚ್ಚು ದನಗಳು ಕಳುವಾದ ಬಗ್ಗೆ ಸುದ್ದಿಯಾಗಿದೆ.

 

ಅಳಿವಿನಂಚಿನಲ್ಲಿರುವ ಕಪಿಲ ತಳಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾಲೀಕ ಪ್ರಕಾಶ್ ಶೆಟ್ಟಿ ಮುತುವರ್ಜಿಯಲ್ಲಿರುವ ಕಪಿಲ ಗೋ ಶಾಲೆಗೆ ಹಾಡಹಗಲೇ ಗೋಹಂತಕರ ದೃಷ್ಟಿ ಬಿದ್ದಿರುವುದು ಗೋಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಪ್ರತೀ ದಿನ ಮೇಯಲೆಂದು ಬಯಲಿಗೆ ಹೋಗುವ ಅರೋಗ್ಯವಂತ ದನಗಳನ್ನು ಗೇರು ಹಣ್ಣು ಹಾಗೂ ಇನ್ನಿತರ ಆಹಾರಗಳನ್ನು ತೋರಿಸಿ ಹತ್ತಿರ ಕರೆಸಿಕೊಳ್ಳುವ ಹಂತಕರು ಬಳಿಕ ಅವುಗಳನ್ನು ಹಗ್ಗದಲ್ಲಿ ಕಟ್ಟಿ ಒಯ್ಯುವ ದೃಶ್ಯಗಳನ್ನು ಕಣ್ಣಾರೆ ಕಂಡ ಜನ ಬೆಚ್ಚಿ ಬಿದ್ದಿದ್ದಾರೆ.

ಗೋ ಶಾಲೆಯ ಸುತ್ತಮುತ್ತಲಿನ ಕೆಲ ಮನೆಗಳ ದನಗಳೂ ಕಾಣೆಯಾಗಿರುವ ಬಗ್ಗೆಯೂ ದೂರು ಬಂದಿದ್ದು,ಗೋ ಶಾಲೆಯ ಸುಮಾರು 40ಕ್ಕೂ ಹೆಚ್ಚು ದನಗಳು ಎರಡೇ ತಿಂಗಳ ಅಂಚಿನಲ್ಲಿ ಕಳುವಾಗಿರುವ ವಿಚಾರ ಸದ್ಯ ಇಡೀ ಜಿಲ್ಲೆಯನ್ನೇ ದಂಗಾಗಿಸಿದೆ. ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಯಲ್ಲಿದ್ದರೂ ರಾಜಾರೋಷವಾಗಿ ಕಳವು ನಡೆಸುತ್ತಿರುವ ಹಂತಕರಿಗೆ ಕಾಣದ ಕೈಗಳ ಸಹಕಾರವೂ ಸಿಗುತ್ತಿದೆ ಎನ್ನುವ ಸುದ್ದಿಯೂ ಹಬ್ಬಿದೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು,ಗೋ ಹತ್ಯೆ,ಅಕ್ರಮ ಗೋ ಸಾಗಾಟದ ಬಗೆಗೆ ಧ್ವನಿ ಎತ್ತುವ ನಾಯಕರಿದ್ದರೂ ಇನ್ನೂ ಕಟುಕರಿಗೆ ಕಠಿಣ ಕಾನೂನಿನ ಅರಿವಾಗದೆ ಇರುವುದು ಬೇಸರದ ಸಂಗತಿಯಾಗಿದೆ.

Leave A Reply

Your email address will not be published.