ಕುಂದಾಪುರ : ಸ್ವಂತ ಚಿಕ್ಕಪ್ಪನಿಂದಲೇ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ!

ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ಚಿಕ್ಕಪ್ಪನೇ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಪೊಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ, ಅದು ತಪ್ಪಿದ್ದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.

 

ಈ ಘಟನೆ ಕುಂದಾಪುರದಲ್ಲಿ ನಡೆದಿತ್ತು. 2019ರಲ್ಲಿ 16 ವರ್ಷದ ಬಾಲಕಿಯ ಮೇಲೆ 36 ವರ್ಷದ ಚಿಕ್ಕಪ್ಪ ಲೈಂಗಿಕವಾಗಿ ಬಳಸಿಕೊಂಡಿದ್ದ. ಅಪ್ರಾಪ್ತ ಬಾಲಕಿ ಗರ್ಭಿಣಿಯಾದಾಗ ಚಿಕ್ಕಪ್ಪನ ಕುಕೃತ್ಯ ಬಹಿರಂಗವಾಗಿತ್ತು.

ಆ ಸಂದರ್ಭದಲ್ಲಿ ಆತ ಮನೆಯವರ ಕಾಲಿಗೆ ಬಿದ್ದು, ಗೋಗೆರೆದು ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಲು ದುಂಬಾಲು ಬಿದ್ದಿದ್ದ. ಬಾಲಕಿಯ ಜೀವನ ನಿರ್ವಹಣೆಯ ಖರ್ಚು ವೆಚ್ಚ ತಾನೇ ನೋಡಿಕೊಳ್ಳುವುದಾಗಿ ದೇವರು, ದೈವದ ಮೇಲೆ ಆಣೆ ಪ್ರಮಾಣ ಮಾಡಿದ್ದ.

ಆದರೆ ಬಾಲಕಿಯ ಪೋಷಕರು ಇದ್ಯಾವುದನ್ನೂ ಪರಿಗಣಿಸದೆ ಕೊಲ್ಲೂರು ಠಾಣೆಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಲಾಗಿತ್ತು.

ನ್ಯಾಯಾಲಯದಲ್ಲಿ 22 ಸಾಕ್ಷಿಗಳ ಪೈಕಿ 16 ಮಂದಿ ವಿಚಾರಣೆ ಮಾಡಲಾಗಿತ್ತು.

ಕುಂದಾಪುರ ನ್ಯಾಯಾಲಯದ ಪ್ರಾಥಮಿಕ ಹಂತದಲ್ಲಿ ಅಭಿಯೋಜನೆ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು, ಉಡುಪಿ ಪೊಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ವಾದವನ್ನು ಮಂಡಿಸಿದ್ದರು.

Leave A Reply

Your email address will not be published.