ನಾಡಿನೆಲ್ಲೆಡೆ ರಾಮನವಮಿ ಸಂಭ್ರಮ! ಹಿಂದೂ – ಮುಸ್ಲಿಂರು ಒಟ್ಟು ಸೇರಿ ಆಚರಿಸಿದರು ರಾಮ ನವಮಿ!!!

ಎಲ್ಲೆಡೆ ಇಂದು
ಶ್ರೀರಾಮ ನವಮಿ ಸಂಭ್ರಮ ತುಂಬಿ ತುಳುಕುತ್ತಿದೆ. ಹಿಂದೂಗಳು ರಾಮನವಮಿಯ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ.

 

ಹಿಜಾಬ್ ವಿವಾದ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಜನರಲ್ಲಿ ವಿಷ ಬೀಜ ಬಿತ್ತಿತ್ತು. ಜನರು ಇನ್ನೂ ಕೂಡಾ ಈ ಘಟನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಆದರೆ ಇಲ್ಲೊಂದು ಕಡೆ ಏಕತೆಯ ಘಟನೆಯೊಂದು ರಾಮನವಮಿಯ ಸಂದರ್ಭದಲ್ಲಿ ಕಾಣಸಿಕ್ಕಿದೆ. ಹಿಂದು- ಮುಸ್ಲಿಂ ಏಕತೆಯ ಬಾಂಧವ್ಯ. ನಾವೆಲ್ಲಾ ಒಂದೇ ಎನ್ನುವ ಭಾವ ಎಲ್ಲರ ಮುಖದಲ್ಲಿ ಕಾಣುತ್ತಿತ್ತು.
ಮುಸ್ಲಿಮರೂ ಕೇಸರಿ ಶಲ್ಯ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಹಿಂದೂಗಳ ಜತೆ ಅವರೂ ಪಾನಕ ಹಂಚುತ್ತಿದ್ದಾರೆ. ಈ ಘಟನೆ ನಡೆದಿರೋದು ತುಮಕೂರಿನಲ್ಲಿ.

ತುಮಕೂರು ನಗರದ ಭದ್ರಮ್ಮ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್‌ನಿಂದ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು, ‘ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಕಾರ್ಯಕರ್ತರು ಜನರಿಗೆ ಪಾನಕ ಹಂಚುತ್ತಿದ್ದಾರೆ.

ಕೇಸರಿ ಶಲ್ಯ ಧರಿಸಿರುವ ಹಿಂದೂ ಹಾಗೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲರೂ ಒಂದೇ ಎಂ ಸಂದೇಶ ಸಾರುತ್ತಿದ್ದಾರೆ.

Leave A Reply

Your email address will not be published.