ಅನ್ನ ಹಾಕಿ ಸಾಕಿದ ಮಾಲೀಕನ ಋಣ ತೀರಿಸಿದ ಶ್ವಾನ| ಚಿರತೆ ದಾಳಿಯಿಂದ ಮನೆ ಮಾಲೀಕನನ್ನು ರಕ್ಷಿಸಿದ ನಾಯಿ!!!

Share the Article

ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ. ಒಂದೊತ್ತು ಊಟ ಹಾಕಿದ ಮಾಲೀಕನ ಋಣವನ್ನು ನಾಯಿ ಯಾವತ್ತೂ ಮರೆಯುವುದಿಲ್ಲ. ಅದಕ್ಕೆ ತುಂಬಾನೇ ಉದಾಹರಣೆಗಳು ಇವೆ. ಅಂಥದ್ದೇ ಒಂದು ಘಟನೆ ರಾಜ್ಯದಲ್ಲಿ ನಡೆದಿದೆ.

ಕಾಡುಪ್ರಾಣಿಗಳಿಂದ ಹೋರಾಡಿ ತನ್ನ ಮನೆ ಮಾಲೀಕನ ಪ್ರಾಣ ರಕ್ಷಿಸಿದ ಕೀರ್ತಿಯೊಂದು ನಾಯಿಗೆ ಸಂದಿದೆ. ಹೌದು…
ಸೊರಬ ತಾಲೂಕಿನ ಆನವಟ್ಟಿ ಸಮೀಪದ ಎಣ್ಣೆಕೊಪ್ಪದಲ್ಲಿ ನಡೆದಿದೆ. ಮಾಲೀಕನನ್ನು ಶ್ವಾನಗಳು ಚಿರತೆಯಿಂದ ಕಾಪಾಡಿರುವುದೇ ಸಾಹಸಮಯ ಕಥೆ.

ಹೌದು, ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ಎಣ್ಣೆಕೊಪ್ಪ ಗೊಲ್ಲರ ತಾಂಡಾದ ಬಂಗಾರಪ್ಪ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ ಸಾಕು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಮಾಲೀಕನನ್ನು ಕಾಪಾಡಿದ್ದು, ಸಾರ್ವಜನಿಕರಿಂದ ಶ್ವಾನಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave A Reply