ರಾಜಕೀಯದಲ್ಲಿ ಮೂಲೆಗುಂಪಾಗುತ್ತಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ !! | ಚುನಾವಣೆಯಲ್ಲಿ ತಲೆ ತಗ್ಗಿಸಿದ ಬಳಿಕ ‘ಕೈ’ ಆದಾಯದ ಡಬ್ಬಿಗೆ ದೊಡ್ಡ ಹೊಡೆತ

ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ಗೆ ದೇಶದಲ್ಲೆಡೆ ತೀವ್ರ ಹಿನ್ನಡೆಯಾಗಿದೆ. ಅದೆಷ್ಟೋ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪಕ್ಷದ ಆದಾಯಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. 2020-2021 ರ ಹಣಕಾಸು ವರ್ಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಆದಾಯವು 58% ಕ್ಕಿಂತಲೂ ಕಡಿಮೆಯಾಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ರೂ. 682 ಕೋಟಿಯಷ್ಟಿದ್ದ ಆದಾಯವು ರೂ. 285 ಕೋಟಿಗೆ ಕುಸಿದಿದೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಕಾಂಗ್ರೆಸ್ ಹೇಳಿಕೊಂಡಿದೆ.
ಆದಾಯವೂ ಕಡಿಮೆಯಾಗಿರುವಂತೆ ಪಕ್ಷದ ಖರ್ಚು ವೆಚ್ಚಗಳು ಕಡಿಮೆಯಾಗಿದ್ದು, 2019 ರಲ್ಲಿ 998 ಕೋಟಿ ರೂ. ಹಣ ವ್ಯಯ ಮಾಡಿದ್ದ ಕಾಂಗ್ರೆಸ್ 2021 ರಲ್ಲಿ 209 ಕೋಟಿ ರೂ. ಖರ್ಚು ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದೆ.

2018-19 ರಲ್ಲಿ 918 ಕೋಟಿ ರೂ. ಆದಾಯ ಕಾಂಗ್ರೆಸ್‍ಗೆ ಬಂದಿತ್ತು. ಇದಾದ ಬಳಿಕ ಆದಾಯ ನಿರಂತರವಾಗಿ ಕಡಿಮೆಯಾಗಿದೆ ಎಂದು ಮಾರ್ಚ್ 30 ರಂದು ಸಲ್ಲಿಸಿದ್ದ ಅಫಿಡೆವಿಟ್‍ನಲ್ಲಿ ಉಲ್ಲೇಖಿಸಲಾಗಿದೆ. ಆಡಿಟ್ ರಿಪೋರ್ಟ್ ಪ್ರಕಾರ ಕಾಂಗ್ರೆಸ್‍ಗೆ ಬಹುಪಾಲು ಆದಾಯ ಕೂಪನ್‍ಗಳನ್ನು ನೀಡುವುದರಿಂದ ಬಂದಿದೆ. ಕೂಪನ್‍ಗಳಿಂದ 156.9 ಕೋಟಿ ರೂ. ಸಂಗ್ರಹವಾಗಿದ್ದು, ಇದು ಅನುದಾನ ದೋಣಿಗಳನ್ನು ಒಳಗೊಂಡಿದೆ. 95 ಕೋಟಿ ರೂ. ಕೊಡುಗೆಗಳಿಂದ, 20.7 ಕೋಟಿ ರೂ. ಶುಲ್ಕವು ಚಂದಾದಾರಿಕೆಯಿಂದ ಬಂದಿದೆ.

ಎನ್‍ಸಿಪಿ ಮತ್ತು ಜೆಡಿಯು ಪಕ್ಷಗಳು ಆಡಿಟ್ ರಿಪೋರ್ಟ್ ಸಲ್ಲಿಸಿದ್ದು, ವರದಿಯ ಪ್ರಕಾರ, ಹಣಕಾಸು ವರ್ಷ 2020 ರಲ್ಲಿ ಎನ್‍ಸಿಪಿ ಆದಾಯವು ರೂ. 85 ಕೋಟಿಯಿಂದ ಹಣಕಾಸು ವರ್ಷ 2021 ರಲ್ಲಿ 34.9 ಕೋಟಿ ರೂಪಾಯಿಗೆ ಇಳಿಕೆ ಕಂಡಿದೆ. ವೆಚ್ಚವು 109 ಕೋಟಿ ರೂಪಾಯಿಯಿಂದ 2020-21ರಲ್ಲಿ 12-17 ಕೋಟಿ ರೂ. ಗೆ ಕುಸಿತ ಕಂಡಿದೆ. ಭಾರತೀಯ ಜನತಾ ಪಾರ್ಟಿಯ ಮಿತ್ರಪಕ್ಷ ಜೆಡಿಯು ಆದಾಯದಲ್ಲಿ ಏರಿಕೆ ಕಂಡಿದ್ದು, 2020 ರಲ್ಲಿ ರೂ. 23.25 ಕೋಟಿಯಷ್ಟಿದ್ದ ಆದಾಯ 2021ರಲ್ಲಿ ರೂ. 65.31 ಕೋಟಿಗೆ ಏರಿದೆ.

Leave A Reply

Your email address will not be published.